ADVERTISEMENT

ಜಿಲ್ಲೆಯಿಂದ ಹೊರಹೋಗಿ: ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿಗೆ ಬಾಗಲಕೋಟೆ DC ಆದೇಶ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 0:41 IST
Last Updated 18 ಅಕ್ಟೋಬರ್ 2025, 0:41 IST
ಬಾಗಲಕೋಟೆ ಜಿಲ್ಲೆಯ ಚಿಕ್ಕಾಲಗುಂಡಿಯಲ್ಲಿರುವ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯೊಂದಿಗೆ ಡಿಎಸ್‌ಪಿ ಗಜಾನನ ಸುತಾರ ಜಿಲ್ಲಾಧಿಕಾರಿ ಆದೇಶ ಕುರಿತು ಚರ್ಚಿಸಿದರು
ಬಾಗಲಕೋಟೆ ಜಿಲ್ಲೆಯ ಚಿಕ್ಕಾಲಗುಂಡಿಯಲ್ಲಿರುವ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯೊಂದಿಗೆ ಡಿಎಸ್‌ಪಿ ಗಜಾನನ ಸುತಾರ ಜಿಲ್ಲಾಧಿಕಾರಿ ಆದೇಶ ಕುರಿತು ಚರ್ಚಿಸಿದರು   

ಬಾಗಲಕೋಟೆ: ‘ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ರಕ್ಷಣೆಗಾಗಿ ಒಂದು ಗಂಟೆಯಲ್ಲಿ ಮಠದಿಂದ ಹೊರಡಬೇಕು’ ಎಂದು ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಜಿಲ್ಲಾಧಿಕಾರಿ ಆದೇಶ ಜಾರಿಗೊಳಿಸಿದ್ದಾರೆ. 

ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಹಿನ್ನಲೆಯಲ್ಲಿ ಶುಕ್ರವಾರ ಬೀಳಗಿ ತಾಲ್ಲೂಕಿನ ಚಿಕ್ಕಾಲಗುಂಡಿಯಲ್ಲಿ ಇರುವ ಕನೇರಿ ಶಾಖಾ ಮಠದಲ್ಲಿ ಸ್ವಾಮೀಜಿ ಉಳಿದುಕೊಂಡಿದ್ದಾರೆ.

ಜಿಲ್ಲಾಧಿಕಾರಿ ಸಂಗಪ್ಪ, ಡಿವೈಎಸ್‌ಪಿ ಗಜಾನನ ಸುತಾರ, ಬೀಳಗಿ ತಹಶೀಲ್ದಾರ್ ವಿನೋದ ಹತ್ತಳ್ಳಿ ಅವರು ಈ ಕುರಿತು ಸೂಚನೆ ನೀಡಿದರು. 

ADVERTISEMENT

ನೋಟಿಸ್ ಪಡೆದ ಸ್ವಾಮಿಜಿ, ‘ಯಾವುದೇ ಕಾರಣಕ್ಕೂ ತೆರಳುವುದಿಲ್ಲ. ಬಂಧಿಸುವಂತಿದ್ದರೆ, ಬಂಧಿಸಿ. ಸಮಾಧಾನ ಆಗುವವರೆಗೆ ಜೈಲಿನಲ್ಲಿಡಿ.  ಪರಿಣಾಮಕ್ಕೆ ನೀವೇ ಜವಾಬ್ದಾರರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.