
ಪ್ರಜಾವಾಣಿ ವಾರ್ತೆ
ಸಾವು (ಪ್ರಾತಿನಿಧಿಕ ಚಿತ್ರ)
ಬಾಗಲಕೋಟೆ: ನವನಗರದ ಸೆಕ್ಟರ್ ನಂಬರ್ 49ರಲ್ಲಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಭಾನುವಾರ ಮೃತರಾಗಿದ್ದಾರೆ
ಬೀದಿ ಬದಿ ವಿದ್ಯುತ್ ದೀಪಗಳ ಆನ್ ಆ್ಯಂಡ್ ಆಫ್ ಮಾಡಲು ಬಾಕ್ಸ್‌ವೊಂದನ್ನು ಕೂಡಿಸಲಾಗಿದೆ. ಅದರಿಂದ ಹೊರಗಡೆ ಬಂದಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಕೆಳಗಡೆ ಬಿದ್ದಿದ್ದಾರೆ.
ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು ಕೆಲವರು ಯತ್ನಿಸಿದ್ದಾರೆ. ಇನ್ನು ಕೆಲವರು ಅದನ್ನು ವಿಡಿಯೊ ಮಾಡಿಕೊಳ್ಳುತ್ತಾ ನಿಂತಿದ್ದರು. ಅಷ್ಟರಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ.
ವ್ಯಕ್ತಿಯನ್ನು ರಾಜಸ್ಥಾನದ ಮೂಲದವರೆಂದು ಗುರುತಿಸಲಾಗಿದ್ದು, ಹೆಸರು ಗೊತ್ತಾಗಿಲ್ಲ.