
ಬಾಗಲಕೋಟೆ: ನಗರದ ತರಕಾರಿ ಮಾರುಕಟ್ಟೆ ಬಳಿ ಶುಕ್ರವಾರ ಮಧ್ಯಾಹ್ನ ಕಲ್ಲು ತೂರಾಟ ಮಾಡಲಾಗಿದೆ.
ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ, ಕುಮಾರಸ್ವಾಮಿ ಹಿರೇಮಠ ಮತ್ತಿತರರ ಮುಖಂಡತ್ವದಲ್ಲಿ ಸಭೆ ನಡೆದಿತ್ತು.
ಸಭೆ ಮುಗಿಸಿಕೊಂಡ ಯುವಕರ ದಂಡು ತರಕಾರಿ ಮಾರುಕಟ್ಟೆಯತ್ತ ಬಂದಿತು. ಆ ವೇಳೆ ಕಲ್ಲು ತೂರಾಟ ನಡೆದಿದೆ.
ಕಲ್ಲು ತೂರಾಟ ಮಾಡಿದ ಯುವಕರನ್ನು ಚದರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ಅಂಗಡಿಗಳು ಬಂದ್: ತರಕಾರಿ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂಗಡಿಗಳು ಬಂದ್ ಆಗಿದ್ದವು.
ಗುರುವಾರ ರಾತ್ರಿ ಶಿವಾಜಿ ಜಯಂತಿ ಮೆರವಣಿಗೆ ತೆರಳುವ ವೇಳೆ ಪಂಕಾ ಮಸೀದಿ ಬಳಿ ಕಲ್ಲು ತೂರಾಟ ನಡೆದಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಢ ಸಿದ್ದಾರ್ಥ ಗೋಯಲ್ ಅವರ ತಲೆಗೆ ಗಾಯವಾಗಿತ್ತು.
ಬಿಗುವಿನ ವಾತಾವರಣೆ: ನಗರದಲ್ಲಿ ಬಿಗುವಿನ ವಾತಾವರಣವಿದೆ. ಇಂದಿನಿಂದ ಫೆ.24ರವರೆಗೆ ನಿಷೇಧಾಜ್ಞೆ ವಿಧಿಸಿದ್ದರೂ, ಯುವಕರು ಗುಂಪಾಗಿ ತಿರುಗಾಡುತ್ತಿದ್ದಾರೆ.
ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸುವ ಮೂಲಕ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆhttps://www.prajavani.net/district/bagalkot/stone-pelting-case-section-one-forty-four-imposed-in-bagalkote-3790123
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.