ADVERTISEMENT

ಬಾಗಲಕೋಟೆ | ಕಳ್ಳತನ, ಹಲ್ಲೆ; 10 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 4:11 IST
Last Updated 10 ಸೆಪ್ಟೆಂಬರ್ 2025, 4:11 IST
<div class="paragraphs"><p>ನ್ಯಾಯಾಲಯ ತೀರ್ಪು</p></div>

ನ್ಯಾಯಾಲಯ ತೀರ್ಪು

   

ಬಾಗಲಕೋಟೆ: ಮನೆ ಕಳ್ಳತನ, ಮನೆಯವರ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಬ್ಬರಿಗೆ 10 ವರ್ಷ ಕಠಿಣ ಹಾಗೂ ₹10 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎನ್‌.ವಿ. ವಿಜಯ್‌ ತೀರ್ಪು ನೀಡಿದ್ದಾರೆ.

ಆನದಿನ್ನಿ ಗ್ರಾಮದ ವ್ಯಾಪ್ತಿಯ ಮನೆಯೊಂದರ ಹಿಂಬಾಗಲಿನಿಂದ ಒಳಗೆ ನುಗ್ಗಿದ್ದ ಕಳ್ಳರು, ಮನೆಯವರ ಮೇಲೆ ಹಲ್ಲೆ ಮಾಡಿ 89 ಗ್ರಾಂ ಚಿನ್ನ, ₹10 ಸಾವಿರ ನಗದು ಕಳ್ಳತನ ಮಾಡಿದ್ದರು.

ADVERTISEMENT

ಕುಲಕರ್ಣಿ ಚವ್ಹಾಣ, ಸಂತೋಷ ಭೋಸಲೆಗೆ ಶಿಕ್ಷೆ ವಿಧಿಸಲಾಗಿದೆ. ಇವರೊಂದಿಗೆ ಕಳ್ಳತನದಲ್ಲಿ ಭಾಗಿಯಾಗಿದ್ದ ಅಕ್ಷಯ ಕಾಳೆ, ಬರಸ್ಯಾ ಕಾಳೆಗೆ 13 ತಿಂಗಳ ಜೈಲು ಶಿಕ್ಷೆ, ₹10 ಸಾವಿರ ದಂಡ ವಿಧಿಸಲಾಗಿದೆ.

ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಿಪಿಐ ಎನ್‌.ಎನ್‌. ಅಂಬಿಗೇರ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅಭಿಯೋಜಕ ವಿ.ಜಿ. ಹೆಬಸೂರ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.