ADVERTISEMENT

ಜಮಖಂಡಿಯಲ್ಲಿಯೇ ವಿಶ್ವವಿದ್ಯಾಲಯ ಮುಂದುವರೆಯಲಿ: ಪ್ರದೀಪ ಮೆಟಗುಡ್ಡ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 3:12 IST
Last Updated 21 ಆಗಸ್ಟ್ 2025, 3:12 IST
ಇಂಚಗೇರಿ ಅಧ್ಯಾತ್ಮ ಸಂಪ್ರದಾಯದ ಗುರು ಪ್ರದೀಪ ಮೆಟಗುಡ್ಡ
ಇಂಚಗೇರಿ ಅಧ್ಯಾತ್ಮ ಸಂಪ್ರದಾಯದ ಗುರು ಪ್ರದೀಪ ಮೆಟಗುಡ್ಡ   

ಜಮಖಂಡಿ: ಸದನದಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಕೂಡಲಸಂಗಮಕ್ಕೆ ಸ್ಥಳಾಂತರಿಸಬೇಕು ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ ಸಮಂಜಸವಲ್ಲ, ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕಾದರೆ ಹಲವಾರು ಹೋರಾಟಗಳನ್ನು ಮಾಡಿ ಪಡೆಯಲಾಗಿದೆ ಎಂದು ಇಂಚಗೇರಿ ಅಧ್ಯಾತ್ಮ ಸಂಪ್ರದಾಯದ ಗುರು ಪ್ರದೀಪ ಮೆಟಗುಡ್ಡ ತಿಳಿಸಿದ್ದಾರೆ.

ಕೂಡಲಸಂಗಮದಲ್ಲಿ ಈಗಾಗಲೇ ವಚನ ಸಂಶೋಧನಾ ಕೇಂದ್ರವಿದೆ. ಆ ಕೇಂದ್ರದಿಂದ ಧಾರ್ಮಿಕ ಲೋಕಕ್ಕೆ ಹಾಗೂ ಭಾರತೀಯ ಪರಂಪರೆಗೆ ಕೊಡುಗೆ ನೀಡುವ ಕಾರ್ಯ ಈಗಾಗಲೇ ನಡೆಯುತ್ತಿದೆ. ಆದ್ದರಿಂದ ವಿಶ್ವವಿದ್ಯಾಲಯಕ್ಕೆ ಬೆಂಬಲ ನೀಡಬೇಕು ಎಂದರು.

ಇತಿಹಾಸಕಾರರು ಹಾಗೂ ಶಾಸನಗಳು ಹೇಳುವ ಪ್ರಕಾರ 10ನೇ ಶತಮಾನದಲ್ಲಿ ವಿಶ್ವವಿದ್ಯಾಲಯದ ರೂಪದಲ್ಲಿ ಜೈನ ಗುರುಕುಲ, 12ನೇ ಶತಮಾನದಲ್ಲಿ 250 ಜನ ಬ್ರಾಹ್ಮಣ ಯುವಪಟುಗಳು ವೇದಶಾಸ್ತ್ರ ಅಧ್ಯಾಯನಗಳನ್ನು ಮುಗಿಸಿ ಧರ್ಮ ಪ್ರಚಾರ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.