ADVERTISEMENT

ಬಾಗಲಕೋಟೆ | ಕಲ್ಲು ತೂರಾಟ ಪ್ರಕರಣ: ಪಂಕಾ ಮಸೀದಿ ಬಂದ್‌ಗೆ 15 ದಿನ ಗಡುವು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 19:22 IST
Last Updated 26 ಫೆಬ್ರುವರಿ 2026, 19:22 IST
   

ಬಾಗಲಕೋಟೆ: ‘ಕಲ್ಲು ತೂರಾಟದ ಸಂದರ್ಭದಲ್ಲಿ ಪಂಕಾ ಮಸೀದಿಯಲ್ಲಿ ಸೇರಿದ್ದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಬೇಕು. ಮಸೀದಿಯನ್ನು 15 ದಿನಗಳಲ್ಲಿ ಬಂದ್ ಮಾಡಬೇಕು’ ಎಂದು ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ಸದಸ್ಯರು ಗುರುವಾರ  ಬೃಹತ್ ಪ್ರತಿಭಟನೆ ನಡೆಸಿದರು.

ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತ ಸಹ ಸಂಚಾಲಕ ಶ್ರೀಕಾಂತ ಹೊಸಕೆರೆ ಮಾತನಾಡಿ, ‘ನಾಲ್ಕು ದಶಕಗಳಿಂದಲೂ ಅದೇ ಮಸೀದಿಯಿಂದ ಕಲ್ಲು, ಚಪ್ಪಲಿ ಎಸೆದ ಘಟನೆಗಳು ಹಲವಾರು ಬಾರಿ ನಡೆದಿವೆ. ಆದ್ದರಿಂದ ಆ ಮಸೀದಿಯನ್ನು ಶಾಶ್ವತವಾಗಿ ಬಂದ್ ಮಾಡಬೇಕು’ ಎಂದು ಆಗ್ರಹಿಸಿದರು.

‘ಮಸೀದಿ ಸಮಿತಿ ಮತ್ತು ಘಟನೆ ನಡೆದಾಗ, ಮಸೀದಿಯಲ್ಲಿದ್ದವರ ವಿರುದ್ಧ ಪ್ರಕರಣ ದಾಖಲಿಸಬೇಕು. ಪೊಲೀಸರು ಅಹಿತಕರ ಘಟನೆ ಕಾರಣವಾದ ಮಸೀದಿ ಬಂದ್ ಮಾಡುವ ಬದಲು ಇಡೀ ಊರನ್ನೇ ಬಂದ್ ಮಾಡಿದ್ದಾರೆ’ ಎಂದು ಆರೋಪಿಸಿದರು. 

ADVERTISEMENT

ಬಸವಾನಂದ ಸ್ವಾಮೀಜಿ, ಹಿಂದೂ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಆರ್. ಶಿಂಧೆ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.