ADVERTISEMENT

'ಬಸವ ಸಂಸ್ಕೃತಿ ಯಾತ್ರೆ: ಸಿಎಂ ಅಂತರ ಕಾಯ್ದುಕೊಳ್ಳಲಿ'

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 18:09 IST
Last Updated 4 ಅಕ್ಟೋಬರ್ 2025, 18:09 IST
   

ಬಾಗಲಕೋಟೆ: ‘ಲಿಂಗಾಯತವಾದಿಗಳು ಬೆಂಗಳೂರಿನಲ್ಲಿ ಏರ್ಪಡಿಸಿರುವ ಬಸವ ಸಂಸ್ಕೃತಿ ಯಾತ್ರೆಯ ಸಮಾರೋಪವು ಕಾಂಗ್ರೆಸ್ ಪಕ್ಷದ ಅವನತಿಗೆ ನಾಂದಿ ಹಾಡಲಿದೆ. ಸಿ.ಎಂ ಸಿದ್ದರಾಮಯ್ಯ ಇದರಲ್ಲಿ ಪಾಲ್ಗೊಳ್ಳ ಬಾರದು’ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

‘ಸಿದ್ದರಾಮಯ್ಯ ಅವರು ಸಮಾಜವನ್ನು ವಿಘಟನೆ ಮಾಡಲು ಹೊರಟಿರುವ ಗುಂಪಿನಿಂದ ಅಂತರ ಕಾಯ್ದುಕೊಳ್ಳಬೇಕು. ಹಿಂದೆ ಅನೇಕ ಸ್ವಾಮೀಜಿಗಳು, ನಾಯಕರು ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಕುರಿತು ಹಿನ್ನಡೆ ಅನುಭವಿಸಿದ್ದಾರೆ. ಈಗ ಮತ್ತೆ ವ್ಯರ್ಥಪ್ರಯತ್ನ ನಡೆದಿದೆ. ಪ್ರತ್ಯೇಕ ಧರ್ಮ ಎನ್ನುತ್ತಿರುವುದು ಅಖಂಡ ವೀರಶೈವ ಲಿಂಗಾಯತ ಸಮಾಜಕ್ಕೆ ಮಾಡುವ ದ್ರೋಹ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

‘ಭಾನುವಾರದ ಸಮಾರೋಪದಲ್ಲಿ ಮುಖ್ಯಮಂತ್ರಿ ಅವರನ್ನು ಸನ್ಮಾನಿಸುತ್ತೇವೆ ಎಂದು ಸಂಘಟಕರು ಪ್ರಚಾರ ಮಾಡಿದ್ದಾರೆ. ಸಮಾಜಕ್ಕೆ ಬೇಡವಾದ ಸ್ವಾಮೀಜಿಗಳ ಬೇಡಿಕೆ ಮನ್ನಿಸುವುದು ಸಿದ್ದರಾಮಯ್ಯ ಅವರ ವ್ಯಕ್ತಿತ್ವ, ಪಕ್ಷಕ್ಕೆ ಧಕ್ಕೆ ತರಲಿದೆ. ಹಿಂದೆ ಉಂಡಿರುವ ಕಹಿಯನ್ನು ಮುಂದೆ ಅನುಭವಿಸಬೇಡಿ’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.