
ಪ್ರಜಾವಾಣಿ ವಾರ್ತೆ
ಅಮೀನಗಡ: ಪಟ್ಟಣದ ಕುರುಹಿನಶೆಟ್ಟಿ ಸಮಾಜದ ಬಸವೇಶ್ವರ ದೇವರ ಕಳಸದ ಮೆರವಣಿಗೆಯು ಗುರುವಾರ ಸಕಲ ವಾದ್ಯಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ನೆರವೇರಿತು.
ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ತೇರಿನ ಬಜಾರ, ಹಳೆ ಪೋಸ್ಟ್ ಆಫೀಸ್, ಕುಂಬಾರ ಓಣಿ, ಮುಖ್ಯರಸ್ತೆ ಮಾರ್ಗವಾಗಿ ದೇವಸ್ಥಾನ ತಲುಪಿತು.
ಮೆರವಣಿಗೆಯಲ್ಲಿ ಸಮಾಜದ ಮನೋಹರ ರಕ್ಕಸಗಿ, ಮಲ್ಲೇಶಪ್ಪ ಹೊದ್ಲೂರ, ಸಂತೋಷ ಕಂಗಳ, ಅಮರೇಶ್ ಮಡ್ಡಿಕಟ್ಟಿ, ಶಂಕ್ರಪ್ಪ ಮುಸರಿ, ರಮೇಶ ಅರಬಿ, ಶಿವಾನಂದ ಅರಬಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.