ಬಾದಾಮಿ : ‘ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿವೆ, ರಸ್ತೆ ಚಿಕ್ಕದಾಗಿವೆ. ವಾಹನ ಚಾಲನೆಯಲ್ಲಿ ಬಸ್ ಚಾಲಕರು ಜಾಗರೂಕರಾಗಿರಿ ’ ಎಂದು ಸಾರಿಗೆ ಸಂಸ್ಥೆಯ ಘಟಕದ ವ್ಯವಸ್ಥಾಪಕ ಅಶೋಕ ಕೋರಿ ಹೇಳಿದರು.
ಇಲ್ಲಿನ ಸಾರಿಗೆ ಸಂಸ್ಥೆಯ ಘಟಕದಲ್ಲಿ ಭಾನುವಾರ ಜಾಗರೂಕತೆಯ ಚಾಲನೆಯೊಂದಿಗೆ ಹೊಸ ಹೆಜ್ಜೆ ಹೊಸ ಸಂಕಲ್ಪ ಕುರಿತು ಚಾಲಕರಿಗೆ ಪ್ರಯಾಣಿಕರ ಸುರಕ್ಷತೆ, ಸಮಯ ಪಾಲನೆ ಮತ್ತು ಉತ್ತಮ ಸಾರಿಗೆ ವ್ಯವಸ್ಥೆ ಕುರಿತು ಅವರು ತಿಳಿಸಿದರು.
‘ ವಾಹನವನ್ನು ವೇಗವಾಗಿ ಚಲಾಯಿಸಬಾರದು. ಸಂಚಾರ ನಿಯಮಗಳನ್ನು ಪಾಲಿಸಿ. ನಿಮಗೂ ನಿಮ್ಮ ಕುಟುಂಬಗಳ ಬಗ್ಗೆ ಜವಾಬ್ದಾರಿ ಇರುತ್ತದೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಾಳಜಿ ವಹಿಸಬೇಕು ’ ಎಂದು ಹೇಳಿದರು. ಸಾರಿಗೆ ಸಂಸ್ಥೆಯ ವಾಹನ ಚಾಲಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.