ADVERTISEMENT

ಬೆಟ್ಟಿಂಗ್‌ ದಾಸನಾಗಿದ್ದ ಮಗನ ಸಜೀವ ದಹನ: ತಂದೆ, ತಾಯಿ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 4:38 IST
Last Updated 9 ಸೆಪ್ಟೆಂಬರ್ 2025, 4:38 IST
ಅನೀಲ ಪರಪ್ಪ ಕಾನಟ್ಟಿ
ಅನೀಲ ಪರಪ್ಪ ಕಾನಟ್ಟಿ   

ಜಮಖಂಡಿ (ಬಾಗಲಕೋಟೆ ಜಿಲ್ಲೆ): ತಾಲ್ಲೂಕಿನ ಬಿದರಿ ಗ್ರಾಮದಲ್ಲಿ ಡೀಸೆಲ್ ಸುರಿದು ಬೆಂಕಿ ಹಚ್ಚಿ ಮಗನ ಕೊಲೆ ಸಂಬಂಧ  ತಂದೆ, ತಾಯಿ, ಸಹೋದರನ್ನು ಸಾವಳಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.  

ಅನೀಲ ಪರಪ್ಪ ಕಾನಟ್ಟಿ (32) ಕೊಲೆಯಾದವರು. ಮೃತನ ತಂದೆ ಪರಪ್ಪ ಮಲ್ಲಪ್ಪ ಕಾನಟ್ಟಿ, ತಾಯಿ ಶಾಂತಾ ಪರಪ್ಪ ಕಾನಟ್ಟಿ, ಸಹೋದರ ಬಸವರಾಜ ಪರಪ್ಪ ಕಾನಟ್ಟಿ ಬಂಧಿತರು.

‘ದುಶ್ಚಟಗಳ ದಾಸನಾಗಿದ್ದ ಅನೀಲ, ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡು, ಸಾಲ ಮಾಡಿಕೊಂಡಿದ್ದ. ಮದ್ಯ ಕುಡಿದು ಬಂದು ಆಗಾಗ್ಗೆ ಮನೆಯವರ ಜತೆ ಜಗಳ ಮಾಡುತ್ತಿದ್ದ.ಬೇಸತ್ತ ಕುಟುಂಬದವರು ಅವರ ಕೈಕಾಲು ಕಟ್ಟಿ, ಡೀಸೆಲ್‌ ಸುರಿದು ಬೆಂಕಿ ಹಚ್ಚಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.