ADVERTISEMENT

ಭಾವೈಕ್ಯಶ್ರೀ ಪ್ರಶಸ್ತಿಗೆ ಕಣಬೂರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 7:03 IST
Last Updated 7 ಫೆಬ್ರುವರಿ 2026, 7:03 IST
ಶ್ರೀಮಂತಪ್ಪ ಕಣಬೂರ
ಶ್ರೀಮಂತಪ್ಪ ಕಣಬೂರ   

ಮಹಾಲಿಂಗಪುರ: ಪಟ್ಟಣದ ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆ ವತಿಯಿಂದ ನೀಡುವ 2025-26ನೇ ಸಾಲಿನ ಭಾವೈಕ್ಯಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಮರಣೋತ್ತರವಾಗಿ ರನ್ನಬೆಳಗಲಿಯ ಹಿರಿಯ ಭಜನಾ ಕಲಾವಿದ ಶ್ರೀಮಂತಪ್ಪ ಕಣಬೂರ ಆಯ್ಕೆಯಾಗಿದ್ದಾರೆ.

ಪದ್ಮಶ್ರೀ ಪುರಸ್ಕೃತ, ಸೂಫಿ ಸಂತ ಇಬ್ರಾಹಿಂ ಸುತಾರ ಅವರ ನಾಲ್ಕನೇ ಪುಣ್ಯಸ್ಮರಣೆ ಅಂಗವಾಗಿ ಫೆ.7ರಂದು ಸಂಜೆ 5.30 ಗಂಟೆಗೆ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ನಡೆಯಲಿರುವ ಭಾವೈಕ್ಯ ದಿನೋತ್ಸವ ಕಾರ್ಯಕ್ರಮದಲ್ಲಿ ಶ್ರೀಮಂತಪ್ಪ ಕಣಬೂರ ಅವರ ಕುಟುಂಬಸ್ಥರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆ ಅಧ್ಯಕ್ಷ ಹುಮಾಯೂನ ಸುತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT