ADVERTISEMENT

ಭೋವಿ, ವಡ್ಡರ ಎಂದೇ ಬರೆಯಿಸಿ: ಸಿದ್ದರಾಮೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಮೇ 2025, 14:36 IST
Last Updated 8 ಮೇ 2025, 14:36 IST

ಬಾಗಲಕೋಟೆ: ಒಳಮೀಸಲಾತಿ ಸಂಬಂಧ ಗಣತಿದಾರರು ಮನೆಗೆ ಬಂದಾಗ ಭೋವಿ ಜನಾಂಗದವರು ಕಡ್ಡಾಯವಾಗಿ ‘ಭೋವಿ ಅಥವಾ ವಡ್ಡರ’ ಎಂದೇ ಬರೆಸಬೇಕು’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಲಿಂಗೈಕ್ಯ ಕರ್ತೃ ಶರಣಬಸವ ಅಪ್ಪಂಗಳ ಸ್ಮರಣೋತ್ಸವ, ಬುದ್ಧ, ಬಸವ, ಅಂಬೇಡ್ಕರ್ ಸ್ಮರಣೋತ್ಸವ, ಪರಿಶಿಷ್ಟ ಜಾತಿ ಸಮೀಕ್ಷೆಯ ಭೋವಿ-ವಡ್ಡರ ಜನಜಾಗೃತಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಜಾತಿ ಕಾಲಂನಲ್ಲಿ ಭೋವಿ ಅಥವಾ ವಡ್ಡರ ಬರೆಯಿಸಿದಾಗ ಉಪಜಾತಿ ಬರೆಯಿಸುವ ಅಗತ್ಯವಿಲ್ಲ. ನಿಮ್ಮ ಮನೆತನದ ಹೆಸರು, ಅಡ್ಡಹೆಸರು, ಗೋತ್ರದ ಹೆಸರು, ಬೆಡಗಿನ ಹೆಸರು ಬರೆಯಿಸುವ ಅಗತ್ಯವಿಲ್ಲ’ ಎಂದರು.

ಕುಲಕಸುಬಿನ ಕಾಲಂನಲ್ಲಿ ಕಲ್ಲುಕುಟಿಗರು, ಕಲ್ಲು ಕೆತ್ತುವವರು, ಶಿಲ್ಪಿ, ಬೀಸುವ ಕಲ್ಲು ತಯಾರಕರು, ದುರಸ್ತಿ ಮಾಡುವವರು ಹಾಗೂ ಕುಲ ಕಸುಬಿನ ಇತರೆ ಕಾಲಂನಲ್ಲಿ ಕೆರೆ, ಬಾವಿ, ನಾಲೆ, ಕುಡಿಯುವನೀರುಕಟ್ಟೆ, ರಿವಿಟ್ ಮೆಂಟ್ (ಮಣ್ಣು ಕೊಚ್ಚಿ ಹೋಗದಂತೆ ತಡೆಯುವುದು) ಆಯಪಾಯ, ಮಣ್ಣಿನ ಕೆಲಸ ಬರೆಸುವುದರ ಜತೆಗೆ ಪ್ರಸುತ್ತ ಕುಲ ಕಸುಬನ್ನು ಮುಂದುವರಿಸುತ್ತಿದ್ದೇವೆ. ಅಸಂಘಟಿತ ಕ್ಷೇತ್ರದಲ್ಲಿ ದಿನಗೂಲಿ ಕಟ್ಟಡ ಕಾರ್ಮಿಕರಾಗಿದ್ದೇವೆ ಎಂದು ನಮೂದಿಸಬೇಕು ಎಂದು ತಿಳಿಸಿದರು.

ADVERTISEMENT

ಬುದ್ಧ, ಬಸವ, ಅಂಬೇಡ್ಕರ್‌ ಮಾನವೀಯತೆಯ ಮಹಾಮೂರ್ತಿಗಳು. ಜಾಗತಿಕ ಮಹಾಪುರುಷರಾಗಿದ್ದು, ಸಮಾಜದಲ್ಲಿ ಬೇರೂರಿದ್ದ ಜಾತಿ ಪದ್ಧತಿ, ಮೌಢ್ಯಗಳ ವಿರುದ್ಧ ಹೋರಾಡಿದವರು ಎಂದು ತಿಳಿಸಿದರು.

ಅಶೋಕ ಲಿಂಬಾವಳಿ, ಬಾದಮಿ ನಗರಸಭೆ ಅಧ್ಯಕ್ಷ ಪಾಂಡು ಕಟ್ಟಿಮನಿ, ಹುಲ್ಲಪ್ಪ ಹಳ್ಳೂರು, ಚಿನ್ನಪ್ಪ ವಡ್ಡರ, ರಾಮು ಹೊಸಪೇಟೆ, ಸುರೇಶ ಬೇನಾಳ,  ಮಲ್ಲೇಶ, ಹನುಮಂತ ಬೀಳಗಿ, ಸಿದ್ದಪ್ಪ ಕಟ್ಟಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.