ADVERTISEMENT

ಬೀಳಗಿ | ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 5:24 IST
Last Updated 9 ಫೆಬ್ರುವರಿ 2026, 5:24 IST
ಬೀಳಗಿ ಸಿದ್ದೇಶ್ವರ ಪದವಿ ಕಾಲೇಜಿನ 25 ವರ್ಷದ ಹಿಂದಿನ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು
ಬೀಳಗಿ ಸಿದ್ದೇಶ್ವರ ಪದವಿ ಕಾಲೇಜಿನ 25 ವರ್ಷದ ಹಿಂದಿನ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು   

ಬೀಳಗಿ: ಪಟ್ಟಣದ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ 1999- 2000ನೇ ಸಾಲಿನ ವಿದ್ಯಾರ್ಥಿಗಳು ಭಾನುವಾರ ಕಾಲೇಜಿನಲ್ಲಿ ಗುರುವಂದನೆ ಹಾಗೂ ಸ್ನೇಹಸಮ್ಮಿಲನ ಹಮ್ಮಿಕೊಂಡಿದ್ದರು.

ಪುಷ್ಪಮಳೆಗರೆಯುವ ಮೂಲಕ ಎಲ್ಲ ಶಿಕ್ಷಕರನ್ನು ಕಾರ್ಯಕ್ರಮಕ್ಕೆ ಬರ ಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಸಾನ್ನಿಧ್ಯ ವಹಿಸಿದ ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ನೆನಪಿಸಿಕೊಂಡು ಗುರು ವಂದನೆ ಕಾರ್ಯಕ್ರಮ ಮಾಡಿರುವುದು ಅವರಲ್ಲಿರುವ ಸಂಸ್ಕಾರಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಕಲಿತವರು ಇತರರಿಗೆ ಮಾದರಿಯಾಗಿದ್ದಾರೆ’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಚಾರ್ಯ ಎಚ್.ಬಿ. ಧರ್ಮಣ್ಣವರ ಮಾತನಾಡಿದರು. ನಿವೃತ್ತ ಉಪಪ್ರಾಚಾರ್ಯ ವಿ.ಎಸ್.ತಳಕೇರಿ, ನಿವೃತ್ತ ಶಿಕ್ಷಕ ಎಸ್.ಎಚ್.ಚೌಧರಿ ಮಾತನಾಡಿದರು. ಪರಶುರಾಮ ಮಾದರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಲಾ ಗೋಕಾವಿ ನಿರೂಪಿಸಿದರು.

ಪ್ರಾಚಾರ್ಯ ರವೀಂದ್ರ ನಾಯಕ, ನಿವೃತ್ತ ಶಿಕ್ಷಕರಾದ ವಿ.ಟಿ.ಲಮಾಣಿ, ವಿದ್ಯಾ ಮಳಖೇಡ, ಡಿ.ಐ. ಬಡನ್ನಬರ ಪ್ರೇಮಾ ಸಿಂಗಾರಿ, ಎ.ಎನ್. ಹುಸೆನನಾಯಕ, ಎಸ್.ಎಚ್.ಚೌದರಿ, ಸಿದ್ದು ಬಾಗಶೆಟ್ಟಿ, ಸಿ.ಎಫ್.ಕುಂಬಾರ, ಲಕ್ಷ್ಮೀಕಾಂತ ಮಮದಾಪೂರ, ಕೇಶವ ಕುಲಕರ್ಣಿ, ಬಿ.ಬಿ. ಕೋರಿ, ಎಸ್.ವಿ.ಸಜ್ಜನ, ಉಮೇಶ ಮಠಪತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.