ADVERTISEMENT

ಬಿಜೆಪಿ ಪ್ರವೇಶ ನಿಷೇಧ ಫಲಕ ಹಾಕಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 17:53 IST
Last Updated 27 ಮಾರ್ಚ್ 2023, 17:53 IST
ಬಾಗಲಕೋಟೆ ಜಿಲ್ಲೆಯ ತಾಂಡಾಗಳಲ್ಲಿ ಮೀಸಲಾತಿ ಹಿಂಪಡೆಯಲು ಆಗ್ರಹಿಸಿ ಹಾಕಲು ಉದ್ದೇಶಿಸಿರುವ ಫಲಕ
ಬಾಗಲಕೋಟೆ ಜಿಲ್ಲೆಯ ತಾಂಡಾಗಳಲ್ಲಿ ಮೀಸಲಾತಿ ಹಿಂಪಡೆಯಲು ಆಗ್ರಹಿಸಿ ಹಾಕಲು ಉದ್ದೇಶಿಸಿರುವ ಫಲಕ   

ಬಾಗಲಕೋಟೆ: ಒಳ ಮೀಸಲಾತಿ ನೀಡಲು ಕೇಂದ್ರಕ್ಕೆ ಮಾಡಿರುವ ಶಿಫಾ ರಸ್ಸನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಹೋರಾಟ ಮಾಡಲು ಬಾಗಲ ಕೋಟೆ ಬಂಜಾರ ಸೇವಾ ಸಂಘ ನಿರ್ಣ ಯಿಸಿದೆ.

‘ಮೀಸಲಾತಿ ಹಿಂಪಡೆಯುವವ ರೆಗೂ ಬಿಜೆಪಿ ಪ್ರವೇಶವನ್ನು ಸಂಪೂರ್ಣ ವಾಗಿ ನಿಷೇಧಿಸಲಾಗಿದೆ’ ಎಂಬ ಫಲಕ ಹಾಕಲು ನಿರ್ಧರಿಸಲಾಗಿದೆ. ಮಾ. 29ರಿಂದ ಗ್ರಾಮಗಳಲ್ಲಿ ಫಲಕಗಳನ್ನು ಹಾಕಲಾಗುವುದು ಎಂದು ಲಮಾಣಿ ಸಮಾಜದ ಮುಖಂಡ ರಾಜು ಲಮಾಣಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಬಲರಾಮ ನಾಯ್ಕ, ರತ್ನಪ್ಪ ರಾಠೋಡ, ರಮೇಶ ನಾಯಕ ಮತ್ತಿತರರು ಇದ್ದರು.

ADVERTISEMENT

ಒಳ ಮೀಸಲಾತಿ ಹಿಂಪಡೆಯಬೇಕು ಎಂದು ಆಗ್ರಹಿಸಿ ಮುಚಖಂಡಿ ತಾಂಡಾದಲ್ಲಿ ಸೋಮವಾರ ಲಮಾಣಿ ಸಮಾಜದವರು ಪ್ರತಿಭಟಿಸಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜನಗಣತಿ‌ ಆಧಾರಿತ ಮೀಸಲಾತಿ ಅವೈಜ್ಞಾನಿಕ: ‘ಮುಖ್ಯಮಂತ್ರಿ’ ಚಂದ್ರು

ವಿಜಯಪುರ: ‘ಜಾತಿಗಣತಿ‌ ಆಧಾರಿತವಾಗಿ‌ ಮೀಸಲಾತಿ ಕಲ್ಪಿಸಬೇಕೇ ಹೊರತು ಜನಗಣತಿ ಆಧರಿಸಿ ಅಲ್ಲ. ಬಿಜೆಪಿ ಕಣ್ಣೊರೆಸುವ ಕೆಲಸ ಮಾಡಿದೆ, ನೈಜ ಕಾಳಜಿಯಿಂದಲ್ಲ’ ಎಂದು ಎಎಪಿ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಟೀಕಿಸಿದರು.

ನಗರದ ಮಧುವನ ಸಭಾಂಗಣದಲ್ಲಿ ಸೋಮವಾರ ಆಮ್‌ ಆದ್ಮಿ ಪಕ್ಷದ ಸಭೆಗೆ ಚಾಲನೆ‌ ನೀಡಿ ಮಾತನಾಡಿದ ಅವರು, ‘ಜಾತಿಗಣತಿ ಆಧರಿಸಿ ಮೀಸಲಾತಿ ಜಾರಿಯಾದರೆ ಮಾತ್ರ ವೈಜ್ಞಾನಿಕವಾಗಿ ಮೀಸಲಾತಿ ಕಲ್ಪಿಸಲು ಸಾಧ್ಯ’ ಎಂದರು.

‘ಮೀಸಲಾತಿಗೆ ಸಂಬಂಧಿಸಿದಂತೆ ಕಾಂತರಾಜ್ ಆಯೋಗದ ವರದಿ ಯನ್ನು ಸರ್ಕಾರ ಸ್ವೀಕರಿಸಿಲ್ಲ. ಈ ವರದಿಯ ಅಂಶಗಳನ್ನು ಬಿಡುಗಡೆಗೆ ಒತ್ತಾಯಿಸಿ‌ ನಾನು ಕಾನೂನಾತ್ಮಕ ಹೋರಾಟ ಕೈಗೊಂಡಿದ್ದೇನೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.