
ಮುಧೋಳ: ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ನ.23ರಂದು ನಡೆದಿತ್ತು. ಆದರೆ ಮತ ಏಣಿಕೆ ಹಾಗೂ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಬಿಜೆಪಿ ಬೆಂಬಲಿತರು ಜಯಭೇರಿ ಬಾರಿಸಿದ್ದಾರೆ.
‘ಎ’ ವರ್ಗದ ಸದಸ್ಯ ಸಂಘಗಳ ಕ್ಷೇತ್ರದಿಂದ ಮಂಜುನಾಥ ಅರಳಿಕಟ್ಟಿ, ಮಹಾಲಿಂಗಪ್ಪ ಸನದಿ, ಮಾರುತಿ ರಂಗನ್ನವರ, ಸಂತೋಷ ಪಾಟೀಲ (ನಾಲ್ವರು ಬಿಜೆಪಿ ಬೆಂಬಲಿತರು), ‘ಸಿ’ ವರ್ಗದ ಸದಸ್ಯರಿಂದ ಹಿಂದುಳಿದ ವರ್ಗ ‘ಅ’ ಕ್ಷೇತ್ರದಿಂದ ಶ್ರೀಶೈಲ ಗುರವ (ಬಿಜೆಪಿ).
‘ಸಿ’ ವರ್ಗದ ಸದಸ್ಯರಿಂದ ಹಿಂದುಳಿದ ವರ್ಗ ‘ಬ’ ಕ್ಷೇತ್ರದಿಂದ ಅಜೀತ ಪಾಟೀಲ (ಬಿಜೆಪಿ). ‘ಸಿ’ ವರ್ಗದ ಸದಸ್ಯರಿಂದ ಸಾಮಾನ್ಯ ಕ್ಷೇತ್ರದಿಂದ ವಿವೇಕ ಕಕರಡ್ಡಿ, ಹಣಮಂತಗೌಡ ಪಾಟೀಲ (ಬಿಜೆಪಿ), ‘ಸಿ’ ವರ್ಗದ ಸದಸ್ಯರಿಂದ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ದ್ಯಾವಪ್ಪ ನಾಯಕ (ಬಿಜೆಪಿ) ಆಯ್ಕೆಯಾಗಿದ್ದಾರೆ.
ನ.17ರಂದು ಅವಿರೋಧವಾಗಿ ಆಯ್ಕೆಯಾಗಿದ್ದ ‘ಸಿ’ ವರ್ಗದ ಸದಸ್ಯರಿಂದ ಮಹಿಳಾ ಕ್ಷೇತ್ರದಿಂದ ಆಶಾ ಉದಪುಡಿ, ಹೇಮಾ ಲಕ್ಷಾಣಿ, ‘ಸಿ’ ವರ್ಗದ ಸದಸ್ಯರಿಂದ ಪರಿಶಿಷ್ಟ ಜಾತಿ ಕ್ಷೇತ್ರದಿಂದ ತಿರುಪತಿ ಬಂಡಿವಡ್ಡರ (ಪಕ್ಷೇತರ) ಆಯ್ಕೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.