ADVERTISEMENT

ಬಾಗಲಕೋಟೆ: 130 ಕಿ.ಮೀ ದೂರ, 10.30 ತಾಸು ಪ್ರಯಾಣ!

ಕಡ್ಲಿಮಟ್ಟಿ ಗ್ರಾಮದಿಂದ ಯಲ್ಲಮ್ಮನ ಗುಡ್ಡಕ್ಕೆ ಎತ್ತುಗಳ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 11:56 IST
Last Updated 17 ಜನವರಿ 2022, 11:56 IST
ಬಾಗಲಕೋಟೆ ತಾಲ್ಲೂಕು ಕಡ್ಲಿಮಟ್ಟಿಯಿಂದ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಹೋಗಿ ಬಂದ ಎತ್ತುಗಳೊಂದಿಗೆ ಮಾಲೀಕ ಹನಮಂತ ಹೊನಕೇರಪ್ಪ ಕಳಸಪ್ಪನ್ನವರ.
ಬಾಗಲಕೋಟೆ ತಾಲ್ಲೂಕು ಕಡ್ಲಿಮಟ್ಟಿಯಿಂದ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಹೋಗಿ ಬಂದ ಎತ್ತುಗಳೊಂದಿಗೆ ಮಾಲೀಕ ಹನಮಂತ ಹೊನಕೇರಪ್ಪ ಕಳಸಪ್ಪನ್ನವರ.   

ಬಾಗಲಕೋಟೆ:ತಾಲೂಕಿನ ಕಡ್ಲಿಮಟ್ಟಿ ಗ್ರಾಮದ ಹನಮಂತ ಹೊನಕೇರಪ್ಪ ಕಳಸಪ್ಪನ್ನವರ ಅವರ ಎತ್ತುಗಳು 10.30 ತಾಸಿನಲ್ಲಿ ಗ್ರಾಮದಿಂದ 130 ಕಿ.ಮೀ ದೂರದ ಸವದತ್ತಿಯ ಯಲ್ಲಮ್ಮನ ಗುಡ್ಡ ತಲುಪಿ ಸಾಧನೆ ಮಾಡಿವೆ.

ಕಡ್ಲಿಮಟ್ಟಿ ಗ್ರಾಮದಿಂದ ಜನವರಿ 10ರಂದು ರಾತ್ರಿ 9.30ಕ್ಕೆ ಹೊರಟು ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ತಲುಪಿವೆ. ಮರಳಿ ಸವದತ್ತಿ ಯಲ್ಲಮ್ಮನಗುಡ್ಡದಿಂದ (ಜ.13) ಗುರುವಾರ ರಾತ್ರಿ 9 ಗಂಟೆಗೆ ಬಿಟ್ಟು ಕಡ್ಲಿಮಟ್ಟಿ ಗ್ರಾಮಕ್ಕೆ ಬೆಳಿಗ್ಗೆ 9.30ಕ್ಕೆ (12 ಗಂಟೆ 30 ನಿಮಿಷದ ಅವಧಿಗೆ) ತಲುಪಿವೆ. ಬನದ ಹುಣ್ಣಿಮೆ ನಿಮಿತ್ತ ದೇವರ ದರ್ಶನ ಸಲುವಾಗಿ ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಹೋಗಿ ಬರಲಾಗಿದೆ.

ಈ ಸಾಧನೆ ಮಾಡಿದ ಎತ್ತುಗಳನ್ನು ಜನವರಿ 17ರಂದು ಸೋಮವಾರ ಕಡ್ಲಿಮಟ್ಟಿ ಗ್ರಾಮದಲ್ಲಿ ವಿಶೇಷ ಮೆರವಣಿಗೆ ಮೂಲಕ ಅವುಗಳ ಮಾಲೀಕರನ್ನು ಸನ್ಮಾನಿಸಲಾಯಿತು. ₹2 ಲಕ್ಷ ಮೌಲ್ಯದ ಎತ್ತುಗಳನ್ನು ಮಾಲೀಕ ಹನಮಂತ ಹೊನಕೇರಪ್ಪ ಕಳಸಪ್ಪನ್ನವರ ಹೊಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.