ADVERTISEMENT

ರಬಕವಿ-ಬನಹಟ್ಟಿ: ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 15:47 IST
Last Updated 18 ಜುಲೈ 2024, 15:47 IST
ರಬಕವಿ-ಬನಹಟ್ಟಿ ತಾಲ್ಲೂಕಿನ ಯಲ್ಲಟ್ಟಿಯಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳು ನಕಲಿ ವೈದ್ಯ ರಮೇಶ ಸಂತಿ ಅವರ ಆಸ್ಪತ್ರೆಗೆ ಬೀಗ ಹಾಕಿದರು
ರಬಕವಿ-ಬನಹಟ್ಟಿ ತಾಲ್ಲೂಕಿನ ಯಲ್ಲಟ್ಟಿಯಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳು ನಕಲಿ ವೈದ್ಯ ರಮೇಶ ಸಂತಿ ಅವರ ಆಸ್ಪತ್ರೆಗೆ ಬೀಗ ಹಾಕಿದರು   

ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ತಾಲ್ಲೂಕಿನ ಯಲ್ಲಟ್ಟಿ, ನಾವಲಗಿ, ಹನಗಂಡಿಯಲ್ಲಿ ನಕಲಿ ವೈದ್ಯರ ವಿರುದ್ಧ ಜಮಖಂಡಿ ಟಿಎಚ್ಒ ಡಾ. ಜಿ.ಎಸ್. ಗಲಗಲಿ ನೇತೃತ್ವದ ತಂಡ ದಾಳಿ ನಡೆಸಿ ಎರಡು ಆಸ್ಪತ್ರೆಗಳನ್ನು ಬಂದ್‌ ಮಾಡಿಸಿದ ಘಟನೆ ಗುರುವಾರ ನಡೆದಿದೆ.

ತಾಲೂಕಿನ ನಾವಲಗಿ ಗ್ರಾಮದ ಪ್ರವೀಣ ಮಂಟೂರಮಠ, ಯಲ್ಲಟ್ಟಿ ಗ್ರಾಮದ ರಮೇಶ ಸಂತಿ ವಿರುದ್ಧ ಜಿಲ್ಲಾ ಸಕ್ಷಮ‌ ಪ್ರಾಧಿಕಾರಕ್ಕೆ ದೂರು ಸಲ್ಲಿಸಲಾಗಿದೆ ಎಂದು ಡಾ. ಜಿ. ಎಸ್. ಗಲಗಲಿ ತಿಳಿಸಿದರು. ಹನಗಂಡಿ ಗ್ರಾಮದ ಮುನ್ನೋಳ್ಳಿ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಯಲ್ಲಟ್ಟಿಯ ಸಂತಿಯವರಿಗೆ ಈಗಾಗಲೇ ಎಚ್ಚರಿಕೆಯನ್ನು ನೀಡಲಾಗಿತ್ತು.

ಆರೋಗ್ಯ ಅಧಿಕಾರಿಗಳಾದ ಉಮೇಶ ಜೋಶಿ, ರವಿಚಂದ್ರ ಪಾಟೀಲ, ಅಪ್ಪಾಜಿ ಹೂಗಾರ, ಪೊಲೀಸ್ ಇಲಾಖೆಯ ಎಂ.ಎಸ್. ಶೇಗುಣಸಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.