ADVERTISEMENT

‘ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಅವಶ್ಯ’

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 3:02 IST
Last Updated 26 ಆಗಸ್ಟ್ 2025, 3:02 IST
ಕೊಲ್ಹಾರ ಪಟ್ಟಣದ ವಿಠ್ಠಲ ಮಂದಿರ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೌಷ್ಟಿಕ ಆಹಾರ ಮೇಳವನ್ನು ಗಣ್ಯರು ಉದ್ಘಾಟಿಸಿದರು
ಕೊಲ್ಹಾರ ಪಟ್ಟಣದ ವಿಠ್ಠಲ ಮಂದಿರ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೌಷ್ಟಿಕ ಆಹಾರ ಮೇಳವನ್ನು ಗಣ್ಯರು ಉದ್ಘಾಟಿಸಿದರು   

ಕೊಲ್ಹಾರ: ಪಟ್ಟಣದ ವಿಠ್ಠಲ ಮಂದಿರ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಮಹಿಳಾ ಜ್ಞಾನ ವಿಕಾಸ ತಾಲ್ಲೂಕು ಘಟಕದ ಸಹಯೋಗದಲ್ಲಿ ಪೌಷ್ಟಿಕ ಆಹಾರ ಮೇಳ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ಬಾಲಗೊಂಡ, ‘ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳ ಅವಶ್ಯಕತೆ ಇದೆ. ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಮಹತ್ವದ್ದು’ ಎಂದರು.

ತಾಲ್ಲೂಕು ಜ್ಞಾನ ವಿಕಾಸ ಕೇಂದ್ರ ಮುಖ್ಯಸ್ಥರು ಶ್ರೀದೇವಿ ಕಾಳಿಸಿಂಗೆ ಮಾತನಾಡಿ, ‘ಆಧುನಿಕ ಯುಗದಲ್ಲಿ ಉತ್ತಮ ಆರೋಗ್ಯ ಉತ್ತಮ ಸಂಪತ್ತು ಇದ್ದ ಹಾಗೆ’ ಎಂದು ಹೇಳಿದರು.

ADVERTISEMENT

ಪಂಚ ಗ್ಯಾರಂಟಿ ಸಮಿತಿ ಸದಸ್ಯೆ ಕಮಲಾಬಾಯಿ ಮಾಕಾಳಿ, ತಾಲ್ಲೂಕು ಸಮನ್ವಯ ಅಧಿಕಾರಿ ಸಂಗೀತಾ ಮಡಿವಾಳ, ಕಿರಣ, ಈರಮ್ಮ ಮಠಪತಿ, ಸಕ್ಕುಬಾಯಿ ಕಟಬರ, ಭಾರತಿ ಕಟಬರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.