ADVERTISEMENT

ತೆಗ್ಗಿ: ಬಾಲ್ಯ ವಿವಾಹಕ್ಕೆ ತಡೆ

ಸಹಾಯವಾಣಿ ಸಂಖ್ಯೆ 1098ಗೆ ಬಂದ ಕರೆ ಆಧರಿಸಿ ಕ್ರಮ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 15:13 IST
Last Updated 13 ಅಕ್ಟೋಬರ್ 2020, 15:13 IST

ಬಾಗಲಕೋಟೆ: ಗುಳೇದಗುಡ್ಡ ತಾಲ್ಲೂಕಿನ ತೆಗ್ಗಿ ಗ್ರಾಮದಲ್ಲಿ ಮಕ್ಕಳ ಸಹಾಯವಾಣಿ - 1098 ಗೆ ಬಂದ ಕರೆ ಆಧರಿಸಿ ಮಂಗಳವಾರ ಬಾಲ್ಯ ವಿವಾಹ ತಡೆಯಲಾಗಿದೆ.

ತೆಗ್ಗಿ ಗ್ರಾಮದಲ್ಲಿ 10ನೇ ತರಗತಿ ಓದುವ 16 ವಯಸ್ಸಿನ ಹೆಣ್ಣು ಮಗುವಿಗೆ ಬಾಲ್ಯವಿವಾಹಕ್ಕೆ ಸಿದ್ಧತೆ ನಡೆದಿತ್ತು. ಮುಧೋಳ ತಾಲ್ಲೂಕಿನ ವಜ್ರಮಟ್ಟಿಯ ಪದವಿ ಓದುವ ಶಿವಾನಂದ ವಿಠ್ಠಲನ್ನವರ ಅವರೊಂದಿಗೆ ಮದುವೆ ನೆರವೇರಿಸಲು ಕುಟುಂಬದವರು ಮುಂದಾಗಿದ್ದರು.

ಖಚಿತ ಮಾಹಿತಿ ಮೇರೆಗೆ ಮಕ್ಕಳ ಸಹಾಯವಾಣಿ ಸದಸ್ಯರಾದ ಶಾರವ್ವ ಪೂಜಾರ, ಕೆ. ಎಸ್. ನಾಯಕ, ವಿ. ಬಿ. ಭಗವತಿ, ಬಿ.ಬಿ. ಕುಬಕಡ್ಡಿ ಗ್ರಾಮಕ್ಕೆ ತೆರಳಿ ಬಾಲಕಿಯ ಕುಟುಂಬದವರಿಗೆ ಅರಿವು ಮೂಡಿಸಿದರು. 18 ವರ್ಷ ತುಂಬುವವರೆಗೆ ವಿವಾಹ ಮಾಡುವುದಿಲ್ಲ. ಬದಲಿಗೆ ಶಾಲೆಗೆ ಕಳುಹಿಸಲಾಗುವುದು ಎಂದು ಮುಚ್ಚಳಿಕೆ ಪತ್ರ ಬರೆಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.