ADVERTISEMENT

ಚಿಮ್ಮಡ ಬನಶಂಕರಿದೇವಿ ಜಾತ್ರೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 13:59 IST
Last Updated 26 ಫೆಬ್ರುವರಿ 2024, 13:59 IST
ಮಹಾಲಿಂಗಪುರ ಸಮೀಪದ ಚಿಮ್ಮಡ ಗ್ರಾಮದಲ್ಲಿ ಬನಶಂಕರಿದೇವಿ ರಥೋತ್ಸವ ನಡೆಯಿತು
ಮಹಾಲಿಂಗಪುರ ಸಮೀಪದ ಚಿಮ್ಮಡ ಗ್ರಾಮದಲ್ಲಿ ಬನಶಂಕರಿದೇವಿ ರಥೋತ್ಸವ ನಡೆಯಿತು   

ಮಹಾಲಿಂಗಪುರ: ಸಮೀಪದ ಚಿಮ್ಮಡ ಗ್ರಾಮದಲ್ಲಿ ಬನಶಂಕರಿದೇವಿ ಜಾತ್ರೆ ಅಂಗವಾಗಿ ಶನಿವಾರ ರಥೋತ್ಸವ ಹಾಗೂ ಜನಪದ ಉತ್ಸವ ಕಾರ್ಯಕ್ರಮಗಳು ಸಂಭ್ರಮದಿಂದ ನೆರವೇರಿದವು.

ಬೆಳಿಗ್ಗೆ ಮಹಾ ಅಭಿಷೇಕದೊಂದಿಗೆ ಜಾತ್ರೆ ಆರಂಭಗೊಂಡಿತು. ಸುಮಂಗಲೆಯರು ದೇವಿಯ ಉಡಿತುಂಬಿದರು. ಮಧ್ಯಾಹ್ನ ಮುಂಬೈ ಮಾದೇಲಿ, ಕಿಚಡಿ ಮಹಾಪ್ರಸಾದ ವಿತರಣೆ ನಡೆಯಿತು. ಸಂಜೆ ದೇವಿಯ ಅಲಂಕೃತ ರಥೋತ್ಸವ ಕರಡಿ ಮಜಲು, ಬಾಜಾ ಭಜಂತ್ರಿ ಸೇರಿದಂತೆ ಸಕಲ ವಾದ್ಯ ವೃಂದದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ರಾತ್ರಿ ಬನಶಂಕರಿದೇವಿ ಸಾಂಸ್ಕೃತಿಕ ವೇದಿಕೆ ಹಾಗೂ ಬನಶಂಕರಿದೇವಿ ದೇವಸ್ಥಾನ ಸಮಿತಿ ವತಿಯಿಂದ ವೀರಣ್ಣ ಅಂಗಡಿ ತಂಡ ಹಾಗೂ ಅಡವಿಸೋಮಾಪೂರದ ಸಿದ್ಧಲಿಂಗೇಶ್ವರ ಹಾಸ್ಯ ಮತ್ತು ಜನಪದ ಕಲಾಸಂಘದ ನೇತೃತ್ವದಲ್ಲಿ ‘ಜನಪದೋತ್ಸವ’ ಕಾರ್ಯಕ್ರಮ ನಡೆಯಿತು. ಹಲವಾರು ಜನಪದ ಪ್ರಕಾರದ ವಿವಿಧ ಮಾದರಿಯ ಗೀತೆಗಳನ್ನು ಪ್ರಸ್ತುತ ಪಡಿಸಿ ಮನಸೆಳೆದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.