ಬಾಗಲಕೋಟೆ: ಮನುಕುಲಕ್ಕೆ ಪ್ರೀತಿ, ಶಾಂತಿಯ ಸಂದೇಶ ಸಾರಿದ ಏಸುಕ್ರಿಸ್ತರ ಜನ್ಮದಿನದ ಅಂಗವಾಗಿ ಬುಧವಾರ ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕ್ರೈಸ್ತ ಧರ್ಮಿಯರು ಕ್ರಿಸ್ಮ ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕ್ರೈಸ್ತ ಸಮುದಾಯದವರು ಕುಂಟುಬದ ಸದಸ್ಯರು, ಮಕ್ಕಳೊಂದಿಗೆ ಮಂಗಳವಾರ ರಾತ್ರಿಯಿಂದಲೇ ಚರ್ಚ್‌ಗಳಿಗೆ ತೆರಳಿ ಮೋಂಬತ್ತಿ ಬೆಳಗಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಾಗಲಕೋಟೆ ನವನಗರ, ಹಳೇ ಬಾಗಲಕೋಟೆ, ಮುಧೋಳ, ಜಮಖಂಡಿ, ಬಾದಾಮಿ ಸೇರಿದಂತೆ ಜಿಲ್ಲೆಯ ಕೆಲವೆಡೆ ಪಾದ್ರಿಗಳು ಕ್ರಿಸ್ಮಸ್ ಹಬ್ಬದ ಮಹತ್ವ ಸಾರುವ ಪ್ರವಚನ ನೀಡಿದರು.
ಚರ್ಚ್‌ಗಳು ವಿಶೇಷ ಅಲಂಕಾರದಿಂದ ಕಂಗೊಳಿಸಿದವಲ್ಲದೇ, ವಿದ್ಯುತ್ ದೀಪಗಳಿಂದ ಜಗಮಗಿಸಿದವು. ಅಲ್ಲಲ್ಲಿ ಏಸುವಿನ ಬಾಲ್ಯ, ಬದುಕಿನ ಚರಿತ್ರೆ ಹೇಳುವ ಚಿತ್ರಪಟ, ಗೊಂಬೆಗಳ ಪ್ರದರ್ಶನ ಮಾಡಲಾಗಿದ್ದು ಮಕ್ಕಳು, ಮಹಿಳೆಯರು ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.