ADVERTISEMENT

ತ್ಯಾಜ್ಯ ಸುರಿಯುವುದಕ್ಕೆ ನಗರಸಭೆ ತಡೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 14:19 IST
Last Updated 9 ಜೂನ್ 2023, 14:19 IST

ಬಾಗಲಕೋಟೆ: ಆಲಮಟ್ಟಿ ಹಿನ್ನೀರು ನಿಲ್ಲುವ ಪ್ರದೇಶದಲ್ಲಿ ಮಣ್ಣು, ತ್ಯಾಜ್ಯ ಸುರಿಯುವುದನ್ನು ತಡೆಯಲು ನಗರಸಭೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ.

‘ತ್ಯಾಜ್ಯ ತಂದು ಹಾಕಲು ಬಂದ ಲಾರಿ ವಾಪಸ್ ಕಳುಹಿಸಿ, ತ್ಯಾಜ್ಯ ಸುರಿಯದಂತೆ ಸೂಚಿಸಲಾಗಿದೆ. ನಿಗಾ ವಹಿಸಲು ಸಿಬ್ಬಂದಿ ನಿಯೋಜಿಸಲಾಗಿದೆ. ಲಾರಿ ಮಾಲೀಕನಿಗೆ ನೋಟಿಸ್‌ ನೀಡಲಾಗುವುದು ಮತ್ತು ಪೊಲೀಸ್‌ ಠಾಣೆಗೂ ದೂರು ಕೊಡಲಾಗುವುದು’ ಎಂದು ನಗರಸಭೆ ಜೂನಿಯರ್ ಎಂಜಿನಿಯರ್‌ ನವೀದ್ ಖಾಜಿ ‘ಪ್ರಜಾವಾಣಿ‘ಗೆ ತಿಳಿಸಿದರು.

ಆಲಮಟ್ಟಿ ಹಿನ್ನೀರು ಪ್ರದೇಶದಲ್ಲಿ ತ್ಯಾಜ್ಯದ ರಾಶಿ ಕುರಿತು ಜೂನ್ 9ರ  ‘ಪ್ರಜಾವಾಣಿ’ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.