ಗುಳೇದಗುಡ್ಡ: ತಾಲ್ಲೂಕಿನ ಕೆಲವಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಮಂಜುನಾಥ ಪುಂ. ಮುಗಳೊಳ್ಳಿ (ತಿಮ್ಮಸಾಗರ), ಉಪಾಧ್ಯಕ್ಷರಾಗಿ ರಂಗಪ್ಪ ನಿಂ, ತಳವಾರ (ಕೆಲವಡಿ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಕೆ. ಬೆಳವಲದ ತಿಳಿಸಿದ್ದಾರೆ.
ಕೆಲವಡಿ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತಿಮ್ಮಸಾಗರದ ಮಂಜುನಾಥ ಮುಗಳೊಳ್ಳಿ, ಅದೇ ಗ್ರಾಮದ ಮುತ್ತಪ್ಪ ಕಾಳನ್ನವರ ಈ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಇಬ್ಬರಲ್ಲಿ ಮುತ್ತಪ್ಪ ಕಾಳನ್ನವರ ಅವರು ನಾಮಪತ್ರ ಹಿಂದಕ್ಕೆ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆಗೊಂಡಿದೆ. ಸಂಘದ 12 ಜನ ಸದಸ್ಯರಲ್ಲಿ ಮಹಿಬೂಬ ಬಾ. ಮುಲ್ಲಾ ಅವರು ಗೈರಾಗಿದ್ದಾರೆ. ಉಳಿದ 11 ಜನ ಸದಸ್ಯರು ಚುನಾವಣೆಯಲ್ಲಿ ಹಾಜರಿದ್ದರು.
ಸಂಘದ ನಿರ್ದೇಶಕರಾದ ಬಸನಗೌಡ ವೀ. ಗೌಡರ, ಮಹಾದೇವಪ್ಪ ಹ.ಛಬ್ಬಿ, ಸೈಯದ ಮ.ಖಾಜಿ, ಜಗನ್ನಾಥ ದೇ. ಬಡಿಗೇರ, ಮುತ್ತಪ್ಪ ಕಾಳನ್ನವರ, ತುಕಾರಾಮ ಹ. ಬಂಡಿವಡ್ಡರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.