
ರಬಕವಿ ಬನಹಟ್ಟಿ: ‘ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ನೀಡುತ್ತಿದ್ದು, ಸಮಾಜದ ಅಭಿವೃದ್ಧಿಗಾಗಿ ಸಮುದಾಯ ಭವನವನ್ನು ಸದ್ಬಳಕೆ ಮಾಡಿಕೊಳ್ಳಿ’ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಇಲ್ಲಿನ ಸೋಮವಾರ ಪೇಟೆಯ ಮಹಾದೇವ ದೇವಸ್ಥಾನದ ಹತ್ತಿರದ ಶಿವಶಿಂಪಿ ಸಮಾಜದ ಸಮುದಾಯ ಭವನಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಸಂಘಟನೆಯಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಶಿವಸಿಂಪಿ ಸಮುದಾಯದವರು ಶ್ರಮ ಜೀವಿಗಳು. ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಭಿವೃದ್ಧಿಯಾಗಲು ಸಮುದಾಯ ಭವನ ಅಗತ್ಯವಾಗಿದೆ. ಈಗ ₹ 5 ಲಕ್ಷ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಸಮಸ್ತ ದೈವ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ತುಂಗಳ, ಪ್ರಭಾಕರ ಮುಳೆದ, ಶ‍್ರೀಶೈಲ ಬೀಳಗಿ, ಕಿರಣ ಆಳಗಿ, ಧರೆಪ್ಪ ಉಳ್ಳಾಗಡ್ಡಿ, ಸಿದ್ದಲಿಂಗಪ್ಪ ತುಂಗಳ, ಸದಾಶಿವ ಪಾವಟೆ, ಧರೆಪ್ಪ ಉಳ್ಳಾಗಡ್ಡಿ, ಶ್ರೀಶೈಲ ಶಿರೋಳ, ಬಸವರಾಜ ತಾಳಿಕೋಟಿ, ಈಶ್ವರ ಜತ್ತಿ, ಗಂಗಾಧರ ಪಿರಂಗಿ, ರಾಮಣ್ಣ ಭದ್ರನವರ, ಪ್ರವೀಣ ಧಬಾಡಿ ಮಹಾದೇವ ಮಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.