ADVERTISEMENT

ಕಮತಗಿ ಪ.ಪಂ ಕಾಂಗ್ರೆಸ್ ಪಾಲು, ಅಮೀನಗಡ ಪ.ಪಂ ಅತಂತ್ರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 4:33 IST
Last Updated 30 ಡಿಸೆಂಬರ್ 2021, 4:33 IST
   

ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಕಮತಗಿ ಪಟ್ಟಣ ಪಂಚಾಯ್ತಿ ಕಾಂಗ್ರೆಸ್ ವಶವಾಗಿದೆ. ಅಮೀನಗಡ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ್ದರೂ ಅತಂತ್ರ ಪರಿಸ್ಥಿತಿ ಸೃಷ್ಟಿಯಾಗಿದೆ.

ಕಮತಗಿ ಪಟ್ಟಣ ಪಂಚಾಯ್ತಿಯ ಒಟ್ಟು 16 ಸ್ಥಾನಗಳ ಪೈಕಿ 11 ಸ್ಥಾನ ಕಾಂಗ್ರೆಸ್ ಪಾಲಾಗಿದ್ದು, ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿ ನಾಲ್ಕು ಸ್ಥಾನ ಹಾಗೂ ಪಕ್ಷೇತರರು ಒಬ್ಬರು ಜಯ ಗಳಿಸಿದ್ದಾರೆ.

ಅಮೀನಗಡ ಪಟ್ಟಣ ಪಂಚಾಯ್ತಿಯ 16 ಸ್ಥಾನಗಳ ಪೈಕಿ ಏಳು ಬಿಜೆಪಿ, ನಾಲ್ಕು ಕಾಂಗ್ರೆಸ್ ಹಾಗೂ ಐದು ಸ್ಥಾನ ಪಕ್ಷೇತರರ ಪಾಲಾಗಿವೆ. ಬಹುಮತ ಗಳಿಸಲು ಬಿಜೆಪಿಗೆ ಇನ್ನೂ ಎರಡು ಸ್ಥಾನಗಳ ಅಗತ್ಯವಿದ್ದು, ಪಕ್ಷೇತರರ ಮನವೊಲಿಕೆ ಅನಿವಾರ್ಯವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.