
ತೇರದಾಳ: ‘ಭಾರತದ ಬಗ್ಗೆ ಹಗುರವಾಗಿ ತಿಳಿದಿದ್ದ ವಿಶ್ವದ ಹಲವು ರಾಷ್ಟ್ರಗಳಿಗೆ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ತಕ್ಕ ಉತ್ತರ ನೀಡಿದ್ದಾರೆ. ಇಂದು ವಿಶ್ವವೇ ಭಾರತದತ್ತ ಮುಖ ಮಾಡುತ್ತಿದೆ. ದೇಶದ ಅಭಿವೃದ್ಧಿಗಾಗಿ ನಾವೆಲ್ಲ ಅವರ ಅಧಿಕಾರವನ್ನು ಬೆಂಬಲಿಸಬೇಕಿದೆ’ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಸದಲಗಿ ಅವರ ತೋಟದ ಮನೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖಂಡ ಮಹಾವೀರ ದಾನಿಗೊಂಡ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಲಂಚಾವತಾರದಲ್ಲಿ ಮುಳಗಿದ್ದು, ಬರುವ ಚುನಾವಣೆಗಳಲ್ಲಿ ಮತದಾರರಿಂದ ತಕ್ಕ ಪಾಠ ಕಲಿಯಲಿದ್ದಾರೆ’ ಎಂದರು.
ಪ್ರವೀಣ ನಾಡಗೌಡ ಮಾತನಾಡಿ, ‘ರಾಜ್ಯದಲ್ಲಿ ಎರಡು ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಅಲ್ಲಿಂದ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರೆ ಅಲ್ಲಿನ ವ್ಯವಸ್ಥೆ ಹಾಗೂ ಪಕ್ಷದ ಸ್ಥಿತಿ ಅರ್ಥವಾಗುತ್ತದೆ’ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಭೀಮಗೊಂಡ ಸದಲಗಿ ಪರಿವಾರ, ಪುರಸಭೆ ಮಾಜಿ ಸದಸ್ಯ ಸುರೇಶ ಕಬಾಡಗಿ ಪರಿವಾರ, ತವನಪ್ಪ ಮಾಟ ಕುಟುಂಬ, ಬಸವರಾಜ ಗಾತಾಡೆ, ಸಾಗರ ಆಳಗೊಂಡ, ಪ್ರಭು ಆಳಗೊಂಡ ಸೇರಿದಂತೆ ಹಲವರು ಶಾಸಕ ಸಿದ್ದು ಸವದಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಗ್ರಾಮೀಣ ಮಂಡಳ ಅಧ್ಯಕ್ಷ ಸುರೇಶ ಅಕ್ಕಿವಾಟ, ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಯುವ ಮೋರ್ಚಾ ಅಧ್ಯಕ್ಷ ವಿಠ್ಠಲ ತಟ್ರಿ, ಕೆಎಂಎಫ್ ಅವಳಿ ಜಿಲ್ಲಾ ನಿರ್ದೇಶಕ ಲಕ್ಕಪ್ಪ ಪಾಟೀಲ, ಅಪ್ಪು ಮಂಗಸೂಳಿ, ನಿಂಗಪ್ಪ ಮಾಲಗಾಂವಿ, ಆನಂದ ಕಂಪು, ಭುಜಬಲಿ ಕೆಂಗಾಲಿ, ಮಲ್ಲಪ್ಪ ಜಮಖಂಡಿ, ಪರಪ್ಪ ಕಾಲತಿಪ್ಪಿ, ಅಭಯಗೌಡ ಪಾಟೀಲ, ಮಲ್ಲಪ್ಪ ಸುಣಧೋಳಿ, ರಮೇಶ ಧರೆನ್ನವರ, ವಿಠ್ಠಲ ಹಾಡಕರ, ಸುರೇಶ ರೇನಕೆ, ಬಾಳು ದೇಶಪಾಂಡೆ, ಪ್ರಕಾಶ ಕುಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.