ADVERTISEMENT

ಹೃದಯಾಘಾತ | ದಂಪತಿ ಸಾವು; ಸಾವಿನಲ್ಲೂ ಒಂದಾದ ಸತಿಪತಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 18:56 IST
Last Updated 4 ನವೆಂಬರ್ 2025, 18:56 IST
ಶಶಿಧರ, ಸರೋಜಾ 
ಶಶಿಧರ, ಸರೋಜಾ    

ಬೀಳಗಿ (ಬಾಗಲಕೋಟೆ ಜಿಲ್ಲೆ): ಇಲ್ಲಿನ ಕಿಲ್ಲಾ ಓಣಿ ನಿವಾಸಿಗಳಾಗಿದ್ದ ದಂಪತಿ ಸೋಮವಾರ ತಡರಾತ್ರಿ ಅರ್ಧ ಗಂಟೆ ಅಂತರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

‘ಚಿನ್ನಾಭರಣ ತಯಾರಿಕೆ ವೃತ್ತಿಯಲ್ಲಿದ್ದ ಶಶಿಧರ ಪತ್ತಾರ (40) ರಾತ್ರಿ 1.45ಕ್ಕೆ ಮೃತಪಟ್ಟರು. ನೊಂದ ಪತ್ನಿ ಸರೋಜಾ ಪತ್ತಾರ (35) ರಾತ್ರಿ 2.15ಕ್ಕೆ ಹೃದಯಾಘಾತದಿಂದ ಮೃತರಾದರು. ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಮಂಗಳವಾರ ಅಂತ್ಯಕ್ರಿಯೆ ನೆರವೇರಿತು’ ಎಂದು ಸ್ಥಳೀಯರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT