ADVERTISEMENT

ಊರು ಸಂಪರ್ಕಿಸುವ ರಸ್ತೆಗೆ ಮುಳ್ಳುಬೇಲಿ!

ಕೆಂದೂರು ತಾಂಡಾ, ಹೊನ್ನಾಕಟ್ಟಿ ಗ್ರಾಮಸ್ಥರಿಂದ ಸ್ವಯಂ ದಿಗ್ಬಂಧನ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 16:35 IST
Last Updated 26 ಮಾರ್ಚ್ 2020, 16:35 IST
ಬಾದಾಮಿ ತಾಲ್ಲೂಕಿನ ಕೆಂದೂರು ತಾಂಡಾ ನಿವಾಸಿಗಳು ಊರಿನ ಸಂಪರ್ಕ ರಸ್ತೆಯಲ್ಲಿ ಮುಳ್ಳಿನ ಬೇಲಿ ಹಾಕಿದ್ದಾರೆ
ಬಾದಾಮಿ ತಾಲ್ಲೂಕಿನ ಕೆಂದೂರು ತಾಂಡಾ ನಿವಾಸಿಗಳು ಊರಿನ ಸಂಪರ್ಕ ರಸ್ತೆಯಲ್ಲಿ ಮುಳ್ಳಿನ ಬೇಲಿ ಹಾಕಿದ್ದಾರೆ   

ಬಾಗಲಕೋಟೆ: ಕೊರೊನಾ ವೈರಸ್ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಹೊರಗಿನವರು ತಮ್ಮೂರಿಗೆ ಬಾರದಂತೆ ತಡೆಯಲು ಬಾದಾಮಿ ತಾಲ್ಲೂಕಿನ ಕೆಂದೂರು ತಾಂಡಾ ಹಾಗೂ ಬಾಗಲಕೋಟೆ ತಾಲ್ಲೂಕಿನ ಹೊನ್ನಾಕಟ್ಟಿ ಗ್ರಾಮಸ್ಥರು ಊರನ್ನು ಸಂಪರ್ಕಿಸುವ ರಸ್ತೆಗಳಿಗೆ ಅಡ್ಡಲಾಗಿ ಮುಳ್ಳು ಬೇಲಿಗಳನ್ನು ಹಾಕಿ ದಿಗ್ಬಂಧನ ವಿಧಿಸಿಕೊಂಡಿದ್ದಾರೆ.

ಕೆಂದೂರು ತಾಂಡಾ ನಿವಾಸಿಗಳು ಯುಗಾದಿ ಹಬ್ಬದ ದಿನವಾದ ಬುಧವಾರ ಬೇಲಿ ಹಾಕಿದರೆ, ಹೊನ್ನಾಕಟ್ಟಿ ಗ್ರಾಮಸ್ಥರು ಗುರುವಾರ ಹಾಕಿದ್ದಾರೆ. ಏಪ್ರಿಲ್ 14ರವರೆಗೆ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಅಲ್ಲಿಯವರೆಗೂ ತಮ್ಮೂರಿಗೆ ಹೊರಗಿನವರು ಯಾರೂ ಬರಬಾರದು. ಊರಿನವರು ಯಾರೂ ಹೊರಗೆ ಹೋಗಬಾರದು ಎಂಬುದು ಊರವರ ಆಶಯ.

ಬೇಲಿ ದಾಟಿ ಯಾರೂ ಒಳಗೆ ಬರಬಾರದು ಎಂದು ಗ್ರಾಮಸ್ಥರು ಪಾಳಿಯಲ್ಲಿ ನಿಂತು ಊರಿನ ಪ್ರವೇಶ ಸ್ಥಳದಲ್ಲಿ ಕಾವಲು ಕಾಯುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.