ADVERTISEMENT

ಬಾಗಲಕೋಟೆ: ಕೊರೊನಾ ಸೋಂಕಿತ ಸಾವು,ಜಿಲ್ಲಾ ಆಸ್ಪತ್ರೆ ಸಿಬ್ಬಂದಿಯಿಂದಲೇ ಶವ ಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 4:37 IST
Last Updated 4 ಏಪ್ರಿಲ್ 2020, 4:37 IST
ಬಾಗಲಕೋಟೆಯಲ್ಲಿ ಕೋವಿಡ್–19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಲ್ಲಿನ ಎಂ.ಜಿ ರಸ್ತೆಯ ಮಾರುಕಟ್ಟೆ ಸಂಕೀರ್ಣವನ್ನು ಪೊಲೀಸರು ಮೊಹರು (ಸೀಲ್) ಹಾಕಿ ಮುಚ್ಚಿದ್ದಾರೆ.
ಬಾಗಲಕೋಟೆಯಲ್ಲಿ ಕೋವಿಡ್–19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಲ್ಲಿನ ಎಂ.ಜಿ ರಸ್ತೆಯ ಮಾರುಕಟ್ಟೆ ಸಂಕೀರ್ಣವನ್ನು ಪೊಲೀಸರು ಮೊಹರು (ಸೀಲ್) ಹಾಕಿ ಮುಚ್ಚಿದ್ದಾರೆ.   

ಬಾಗಲಕೋಟೆ: ಕೋವಿಡ್-19 ಸೋಂಕಿಗೆ ಶುಕ್ರವಾರ ಬಲಿಯಾದ ಬಾಗಲಕೋಟೆಯ 75 ವರ್ಷದ ವೃದ್ಧನ ಶವವನ್ನು ತಡರಾತ್ರಿ ಕುಟುಂಬದ ಸದಸ್ಯರ ಅನುಪಸ್ಥಿತಿಯ ನಡುವೆಯೇ ರೈಲು ನಿಲ್ದಾಣ ಸಮೀಪದ ರುದ್ರಭೂಮಿಯಲ್ಲಿ ಹೂಳಲಾಯಿತು.

ಕೋವಿಡ್-19 ಸೋಂಕಿನ ಶಂಕೆಯ ಕಾರಣಕ್ಕೆ ಕುಟುಂಬದ ಎಲ್ಲ ಸದಸ್ಯರನ್ನು ಜಿಲ್ಲಾ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ನಲ್ಲಿ ಪ್ರತ್ಯೇಕವಾಗಿಇಡಲಾಗಿದೆ. ಹೀಗಾಗಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಯೇ ತಡರಾತ್ರಿ ಒಂದು ಗಂಟೆಗೆ ಶವ ಸಂಸ್ಕಾರ ನೆರವೇರಿಸಿದರು.

ಅದಕ್ಕೂ ಮುನ್ನ ಶವಕ್ಕೆ ಹೈಡ್ರೊಕ್ಲೊರೈನ್ ದ್ರಾವಣ ಸಿಂಪಡಿಸಿ ಸೋಂಕು ಹರಡದಂತೆ ಜಾಗೃತಿ ವಹಿಸಲಾಗಿತ್ತು. ಸಿಬ್ಬಂದಿ ತಲಾ ಎರಡೆರಡು ಸ್ವಯಂ ರಕ್ಷಣೆ ಕವಚಗಳನ್ನು (ಪಿಪಿಟಿ) ಧರಿಸಿ ಶವದ ಅಂತಿಮ ಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.