
ಬಾಗಲಕೋಟೆ: ವೈಕುಂಠ ಏಕಾದಶಿದಿನವಾದ ಮಂಗಳವಾರ ಜಿಲ್ಲೆಯ ವೆಂಕಟೇಶ ದೇವರ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತರು ಸಾಲುಗಟ್ಟಿನಿಂತು ದರ್ಶನ ಪಡೆದರು.
ಬೆಳಿಗ್ಗೆಯೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಯಿತು. ವಿದ್ಯಾಗಿರಿಯ ಕೋಟೆ ಬಾಲಾಜಿ ಮಂದಿರಕ್ಕೆ ಜನಸಾಗರವೇ ಹರಿದು ಬಂದಿತು. ದೇಗುಲ ಮುಂಭಾಗ ಅಳವಡಿಸಿದ್ದ ಕೋಟೆ ವೈಕುಂಠ ದ್ವಾರದಿಂದ ಬಂದ ಭಕ್ತರಿಗೆ ಬಾಲಾಜಿಯ ದರ್ಶನ ದೊರೆಯಿತು. ಗೋವಿಂದ...ಗೋವಿಂದ ನಾಮಸ್ಮರಣೆ ಮೊಳಗಿತು.
ಬಾಗಲಕೋಟೆ ವೆಂಕಟಪೇಟೆ ವೆಂಕಟೇಶ ದೇವರು, ಹಳಪೇಟೆ ವೆಂಕಟೇಶ ದೇವರ ಗುಡಿ ಹಾಗೂ ನವನಗರದ ಕಿಲ್ಲಾ ವೆಂಕಪ್ಪನ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ವಿದ್ಯಾಗಿರಿಯ ಬಾಲಾಜಿ ಮಂದಿರಕ್ಕೆ ಬೆಳಿಗ್ಗೆಯಿಂದ ಸಹಸ್ತಾರು ಭಕ್ತರು ಬಾಲಾಜಿ ದರ್ಶನ ಪಡೆದರು. ಪ್ರಸಾದ ಸ್ವೀಕರಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.