ADVERTISEMENT

ಬಾದಾಮಿ: ಡಿಪ್ತೀರಿಯಾದಿಂದ ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 1:29 IST
Last Updated 10 ಸೆಪ್ಟೆಂಬರ್ 2020, 1:29 IST

ಬಾದಾಮಿ (ಬಾಗಲಕೋಟೆ): ಸಮೀಪದ ಮುತ್ತಲಗೇರಿ ಗ್ರಾಮದಲ್ಲಿ ಬಾಲಕಿ‌ಯೊಬ್ಬರು ಮಂಗಳವಾರ ಮೃತಪಟ್ಟಿದ್ದು, ಗಂಟಲುಮಾರಿ(ಡಿಪ್ತೀರಿಯಾ)ಯಿಂದ ಸಾವು ಸಂಭವಿಸಿದೆ ಮುಷ್ಟಿಗೇರಿಯ ಪ್ರಾಥಮಿಕ ಆರೋಗ್ಯ ಇಲಾಖೆಯ ಡಾ.ನಿತಿನ್ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

‘2ನೇ ವರ್ಗದಲ್ಲಿ ಓದುತ್ತಿದ್ದ ಬಾಲಕಿ ಕರಿಯವ್ವ ಪರಸನಾಯ್ಕರ್(9) ಮಂಗಳವಾರ ಮೃತಪಟ್ಟರೆ, ಪಿಯುಸಿ ವಿದ್ಯಾರ್ಥಿ ಮುತ್ತುರಾಜ ಕೋರನ್ನವರ (17) ಹತ್ತು ದಿನಗಳ ಹಿಂದೆ ಮೃತಪಟ್ಟಿದ್ದಾನೆ’ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇದೇ ಗ್ರಾಮದ ಮತ್ತೊಬ್ಬ ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಬಂದಿದೆ.

‘ಯುವಕ ಬಾಗಲಕೋಟೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಗಂಟಲುಬೇನೆಯಿಂದ ಬಳಲುತ್ತಿದ್ದ ಮತ್ತೊಬ್ಬ ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಡಾ.ನಿತಿನ್ ತಿಳಿಸಿದ್ದಾರೆ.

ADVERTISEMENT

ಸಭೆ: ಬಾಲಕಿ ಮೃತಪಟ್ಟ ಹಿನ್ನೆಲೆಯಲ್ಲಿ ಗಂಟಲುಮಾರಿ ರೋಗ ತಡೆಗೆ ಬುಧವಾರ ಗ್ರಾಮದಲ್ಲಿ ಹಿರಿಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸಭೆ ನಡೆಸಿದರು. ‘ಗುರುವಾರದಿಂದ ಗ್ರಾಮದಲ್ಲಿನ ಪ್ರತಿ ಮಗುವನ್ನೂ ಪರೀಕ್ಷಿಸಲಾಗುವುದು. ಗ್ರಾಮಸ್ಥರು ಸಹಕರಿಸಬೇಕು’ ಎಂದು ಕಿರಿಯ ಆರೋಗ್ಯ ಸಹಾಯಕ ಎಸ್.ಬಿ.ಖಾರಿ ಹೇಳಿದರು.

‘ಗ್ರಾಮದಲ್ಲಿ ರೋಗ ಹರಡದಂತೆ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಕಳಿಸಿ ಆರೋಗ್ಯ ತಪಾಸಣೆ ಮಾಡಲಾಗುವುದು‘ ಎಂದು ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಎಂ.ಬಿ.ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.