ADVERTISEMENT

ರಾಮಲಿಂಗೇಶ್ವರ ರಥ ಎಳೆದು ಪುನೀತರಾದ ಭಕ್ತರು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 15:44 IST
Last Updated 2 ಸೆಪ್ಟೆಂಬರ್ 2024, 15:44 IST
ಶಿರೂರ ಪಟ್ಟಣದಲ್ಲಿ ಸೋಮವಾರ ರಾಮಲಿಂಗೇಶ್ವರ ದೇವರ ರಥೋತ್ಸವ ಜರುಗಿತು‌
ಶಿರೂರ ಪಟ್ಟಣದಲ್ಲಿ ಸೋಮವಾರ ರಾಮಲಿಂಗೇಶ್ವರ ದೇವರ ರಥೋತ್ಸವ ಜರುಗಿತು‌   

ರಾಂಪುರ: ಸಮೀಪದ ಶಿರೂರ ಪಟ್ಟಣದಲ್ಲಿ ಸೋಮವಾರ ಶ್ರೀ ರಾಮಲಿಂಗೇಶ್ವರ ದೇವರ ರಥೋತ್ಸವ ಸಂಭ್ರಮದಿಂದ ಜರುಗಿತು.

ಪಟ್ಟಣದ ಅಗಸಿ ಬಳಿ ರಥ ಸಾಗಿ ಬರುತ್ತಿದ್ದಂತೆ ಇಕ್ಕೆಲಗಳಲ್ಲಿ ಹಾಗೂ ಮನೆಗಳ ಚಾವಣಿಯಲ್ಲಿ ನಿಂತಿದ್ದ ಜನ ಉತ್ತತ್ತಿ, ಹಣ್ಣು, ಹೂವು ಎಸೆದು ರಾಮಲಿಂಗೇಶ್ವರ ಮಹಾರಾಜ ಕೀ ಜೈ.. ಘೋಷಣೆ ಹಾಕಿ ಭಕ್ತಿ ಸಮರ್ಪಿಸಿದರು. ಸಾವಿರಾರು ಭಕ್ತರು ಪಾಲ್ಗೊಂಡರು. ಜಿಟಿ ಜಿಟಿ ಮಳೆಯಲ್ಲಿಯೇ ರಥ ಎಳೆಯಲಾಯಿತು.

ಬೆಳಿಗ್ಗೆ ರಾಮಲಿಂಗದೇವರಿಗೆ ರುದ್ರಾಭಿಷೇಕ, ಪೂಜಾ ಕೈಂಕರ್ಯಗಳು ನಡೆದವು. ಭಕ್ತರು ನೈವೇದ್ಯ ಸಮರ್ಪಿಸಿದರು. ರಾತ್ರಿ ವಾದ್ಯ ಮೇಳದೊಂದಿಗೆ ನಂದಿಧ್ವಜ ಮೆರವಣಿಗೆ ನಡೆಯಿತು. ಮಹಿಳೆಯರು ಕಳಸಾರತಿ ಹಿಡಿದು ಭಾಗವಹಿಸಿದ್ದರು.

ADVERTISEMENT
ಶಿರೂರ ಪಟ್ಟಣದಲ್ಲಿ ಸೋಮವಾರ ರಾಮಲಿಂಗೇಶ್ವರ ದೇವರ ರಥೋತ್ಸವ ಜರುಗಿತು‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.