ADVERTISEMENT

ಸತೀಶ ಜಾರಕಿಹೊಳಿ ಅವರಿಂದ ಕಾಮಗಾರಿ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 16:22 IST
Last Updated 14 ಜೂನ್ 2025, 16:22 IST
ಬೀಳಗಿ ತಾಲ್ಲೂಕಿನ ಅನಗವಾಡಿ- ಬೂದಿಹಾಳ (ಎಸ್.ಎ.) ಸೇತುವೆ ನಿರ್ಮಾಣದ ನೀಲ ನಕ್ಷೆಯನ್ನು ಸಚಿವ ಸತೀಶ ಜಾರಕಿಹೊಳಿ, ಶಾಸಕ ಜೆ. ಟಿ. ಪಾಟೀಲ ಅವರಿಗೆ ಲೋಕೋಪಯೋಗಿ ಅಧಿಕಾರಿಗಳು ಮಾಹಿತಿ ನೀಡಿದರು.
ಬೀಳಗಿ ತಾಲ್ಲೂಕಿನ ಅನಗವಾಡಿ- ಬೂದಿಹಾಳ (ಎಸ್.ಎ.) ಸೇತುವೆ ನಿರ್ಮಾಣದ ನೀಲ ನಕ್ಷೆಯನ್ನು ಸಚಿವ ಸತೀಶ ಜಾರಕಿಹೊಳಿ, ಶಾಸಕ ಜೆ. ಟಿ. ಪಾಟೀಲ ಅವರಿಗೆ ಲೋಕೋಪಯೋಗಿ ಅಧಿಕಾರಿಗಳು ಮಾಹಿತಿ ನೀಡಿದರು.   

ಬೀಳಗಿ: ಖಿಳೇಗಾಂವ-ಅನಗವಾಡಿ (ಅನಗವಾಡಿ-ಮುಧೋಳ) ರಾಜ್ಯ ಹೆದ್ದಾರಿ 262 ಎಸ್.ಎಚ್.ಡಿ.ಪಿ. ರಾಜ್ಯ ಹೆದ್ದಾರಿ ಸ್ಟೇಜ್-1 ನಲ್ಲಿ ₹20 ಕೋಟಿ ಗಳಲ್ಲಿ ನಡೆದಿರುವ ಕಾಮಗಾರಿಯನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ವೀಕ್ಷಣೆ ಮಾಡಿದರು.

ತಾಲ್ಲೂಕಿನ ಚಿಕ್ಕಾಲಗುಂಡಿ ಗ್ರಾಮದಿಂದ ಕಾತರಕಿ ವರೆಗೆ 7.65 ಕಿ.ಮೀ ವರೆಗೆ ನಡೆಯುತ್ತಿರುವ ಕಾಮಗಾರಿ ವೀಕ್ಷಣೆ ಮಾಡಿ ಬೂದಿಹಾಳ (ಎಸ್.ಎ.)ಅನಗವಾಡಿ ಮಧ್ಯದಲ್ಲಿನ ಸೇತುವೆ ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗುವ ಸ್ಥಳದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಸಚಿವರು ಸ್ಥಳ ಪರಿವೀಕ್ಷಣೆ ಮಾಡಿದರು.

ಘಟಪ್ರಭಾ ನದಿ ತೀರದ ಬೂದಿಹಾಳ (ಎಸ್.ಎ.)-ಅನಗವಾಡಿ ಗ್ರಾಮದ ಮಧ್ಯದಲ್ಲಿರುವ ಸೇತುವೆ ಎತ್ತರಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಾದ್ಯಂತ ಶಾಸಕರಿಂದ ಮಾಹಿತಿ ಪಡೆಯುತ್ತಿದ್ದೇನೆ. ಸೇತುವೆ ನಿರ್ಮಾಣದ ಬೇಡಿಕೆಯನ್ನು ಖುದ್ದಾಗಿ ವೀಕ್ಷಣೆ ಮಾಡುತ್ತಿದ್ದೇನೆ. ಹಣಕಾಸು ವ್ಯವಸ್ಥೆ ನೋಡಿಕೊಂಡು ಆದ್ಯತೆ ಮೇರೆಗೆ ಅವಶ್ಯವಿರುವೆಡೆ ಸೇತುವೆ ನಿರ್ಮಿಸಲಾಗುವುದು ಎಂದು ಹೇಳಿದರು.

ADVERTISEMENT

ಆರ್.ಸಿ.ಬಿ ವಿಜಯೋತ್ಸವದಂದು ಕಾಲ್ತುಳಿದಿಂದ ಸರ್ಕಾರಕ್ಕೆ ಧಕ್ಕೆಯಾಗಿದೆಯೇ ಎಂದು ಪ್ರಶ್ನಿಸಿದಾಗ, ಅದೊಂದು ಆಗಬಾರದ ಘಟನೆಯಾಗಿದೆ. ಮುಂದೆ ಇಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.

ಶಾಸಕ ಜೆ.ಟಿ. ಪಾಟೀಲ, ಎಂ.ಎಲ್. ಕೆಂಪಲಿಂಗಣ್ಣವರ, ಹನಮಂತ ಕಾಖಂಡಕಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ದುರ್ಗಾದಾಸ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಿ.ಆರ್. ದೇಶಪಾಂಡೆ, ಮುಖಂಡರಾದ ಶ್ರೀಶೈಲ ಅಂಟೀನ, ಬಸವರಾಜ ಹಳ್ಳದಮನಿ, ಪ್ರವೀಣ ಪಾಟೀಲ, ಬಸು ಮೇಟಿ, ಚಂದ್ರಶೇಖರ ರಾಠೋಡ, ಸಿದ್ದು ಸಾರಾವರಿ, ಸಂತೋಷ ಬಗಲಿದೇಸಾಯಿ, ನಾರಾಯಣ ಹಾದಿಮನಿ, ಸದಾಶಿವ ಜುಂಜೂರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.