ಬಾದಾಮಿ: ದೀಪಾವಳಿ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳ ಮಾರಾಟ ಜೋರಾಗಿ ನಡೆದಿದ್ದು ಕಂಡು ಬಂದಿತು.
ಲಕ್ಷ್ಮಿ ಪೂಜೆಗೆ ಸ್ಥಳೀಯರು ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರು ಮಾರುಕಟ್ಟೆಯ ಬಟ್ಟೆ ಅಂಗಡಿಯಲ್ಲಿ ಭಾನುವಾರ ಖರೀದಿ ಜೋರಾಗಿ ನಡೆಸಿದ್ದರು.
ಮಣ್ಣಿನ ಹಣತೆ, ಮನೆ ಮತ್ತು ವಾಹನಗಳ ಆಲಂಕಾರಿಕ ವಸ್ತುಗಳು, ಆಕಾಶ ಬುಟ್ಟಿ ಮತ್ತು ಹಣ್ಣುಗಳ ಖರೀದಿ ಜೋರಾಗಿತ್ತು.
ಐದು ಹಣತೆಗೆ ₹100 ರಿಂದ ₹400 ವರೆಗೆ ಮಾರಾಟ ಮತ್ತು ಆಕಾಶ ಬುಟ್ಟಿಗಳು ₹200 ದಿಂದ ₹1000 ವರೆಗೂ ಮಾರಾಟ ನಡೆದಿತ್ತು.
‘ ಹೋದ ವರ್ಸಕ್ಕಿಂತ ಈ ವರ್ಸ ಎಲ್ಲಾ ಸಾಮಾನು ದುಬಾರಿ ಆಗ್ಯಾವರಿ. ವರ್ಸಕ್ಕೊಮ್ಮೆ ದೀಪಾವಳಿ ಹಬ್ಬ ಮಾಡಬೇಕಲ್ಲ ಅನಿವಾರ್ಯ ತೊಗೊಂಡು ಹೋಗ್ತೀವಿ’ ಎಂದು ಆಡಗಲ್ ಗ್ರಾಮದ ಹನುಮಂತಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.