ADVERTISEMENT

ತೇರದಾಳ: ವರದಕ್ಷಿಣೆ ತರುವಂತೆ ಪೀಡಿಸಿ ಕತ್ತರಿಯಿಂದ ಇರಿದು ಪತ್ನಿ ಕೊಲೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:10 IST
Last Updated 12 ಡಿಸೆಂಬರ್ 2025, 5:10 IST
ಆರೋಪಿ ಭರತೇಶ ಮಹೇಶವಾಡಗಿ
ಆರೋಪಿ ಭರತೇಶ ಮಹೇಶವಾಡಗಿ   

ತೇರದಾಳ: ವರದಕ್ಷಿಣೆ ತರುವಂತೆ ಪೀಡಿಸಿ ಹೆಂಡತಿಯ ಕುತ್ತಿಗೆ, ಎದೆ ಭಾಗಕ್ಕೆ ಕತ್ತರಿಯಿಂದ ಇರಿದು ಗಂಡ ಕೊಲೆ ಮಾಡಿರುವ ಘಟನೆ ತೇರದಾಳ ಪಟ್ಟಣದಲ್ಲಿ ಬುಧವಾರ ಮಧ್ಯರಾತ್ರಿ ಜರುಗಿದೆ.

ಇಲ್ಲಿನ ಗುಮ್ಮಟ ಗಲ್ಲಿಯ ಐಸಿಐಸಿಐ ಬ್ಯಾಂಕ್ ಶಾಖೆಯ ಹಿಂದೆ ಇರುವ ಮನೆಯಲ್ಲಿ ವಾಸವಿದ್ದ ಭರತೇಶ ಪಾರೀಸ ಮಹೇಶವಾಡಗಿ (32) ಕೊಲೆಗೈದ ಆರೋಪಿಯಾಗಿದ್ದು, ಲಕ್ಷ್ಮೀ ಭರತೇಶ ಮಹೇಶವಾಡಗಿ(28) ಮೃತರು.

ಆರೋಪಿ ಭರತೇಶ ಹಾಗೂ ಆತನ ತಾಯಿ ಪದ್ಮಾವತಿ ಸೇರಿ ವರದಕ್ಷಿಣೆ ನೀಡುವಂತೆ ಹಲವು ದಿನದಿಂದ ಪೀಡಿಸುತ್ತಿದ್ದು, ಬುಧವಾರ ರಾತ್ರಿ ಕೊಲೆ ಮಾಡುವ ಹಂತಕ್ಕೆ ತಿರುಗಿದೆ ಎಂದು ಮೃತಳ ತಂದೆ ಶಂಕರ ಬಾಳಪ್ಪ ಚಂಡು ಸ್ಥಳೀಯ ಠಾಣೆಯಲ್ಲಿ ಸಲ್ಲಿಸಿದ ದೂರಿನನ್ವಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಪಡೆಯಲಾಗಿದೆ.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾರ್ಗದರ್ಶನದಲ್ಲಿ, ಜಮಖಂಡಿ ಡಿವೈಎಸ್ಪಿ ಎಸ್.ರೋಷನ್ ಬನಹಟ್ಟಿ ಸಿಪಿಐ ಎಚ್.ಆರ್.ಪಾಟೀಲ ನೇತ್ರತ್ವದಲ್ಲಿ ತೇರದಾಳ ಠಾಣಾಧಿಕಾರಿ ಶಿವಾನಂದ ಸಿಂಗನ್ನವರ ದೂರು ದಾಖಲಿಸಿಕೊಂಡು ಘಟನಾ ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.