ADVERTISEMENT

ಬಾಗಲಕೋಟೆ: ಮದ್ಯ ಸೇವಿಸಿ ಅಪಘಾತ ಮಾಡಿದ್ದ ಚಾಲಕನಿಗೆ 10 ವರ್ಷ ಕಠಿಣ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 2:58 IST
Last Updated 31 ಆಗಸ್ಟ್ 2025, 2:58 IST
   

ಬಾಗಲಕೋಟೆ: ಮದ್ಯ ಸೇವಿಸಿ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಮೇಶ ಏಕಬೋಟೆ, 10 ವರ್ಷ ಕಠಿಣ ಶಿಕ್ಷೆ, ₹50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಗಲಗಲಿ ಗ್ರಾಮದ ವಿಠ್ಠಲ ಟೊಣಪೆ ಮದ್ಯ ಕುಡಿದ ಅಮಲಿನಲ್ಲಿ ಬುಲೆರೊ ಜೀಪ್‌ ವೇಗವಾಗಿ ಚಲಾಯಿಸಿಕೊಂಡು ಬಂದು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಟಂಟಂ ವಾಹನಕ್ಕೆ ಡಿಕ್ಕಿ ಹೊಡೆಸಿದ್ದನು.

ಟಂಟಂ ವಾಹನದಲ್ಲಿದ್ದ ಶ್ರವಣಕುಮಾರ ಹಾಗೂ ಅಮಿತ್‌ ಎಂಬುವವರು ಮೃತರಾಗಿದ್ದರು. ಇನ್ನೂ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಟಂಟಂ ವಾಹನವಲ್ಲದೇ ಮೋಟಾರ್‌ ಸೈಕಲ್‌ಗೂ ಡಿಕ್ಕಿ ಹೊಡೆದಿದ್ದರಿಂದ ಆ ವಾಹನ ಚಾಲಕನಿಗೂ ಗಾಯವಾಗಿತ್ತು. ವಿಠ್ಠಲ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದನು.

ADVERTISEMENT

ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಐ ಎಂ.ಎಸ್‌. ತುಳಸಿಗೇರಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಎಸ್‌.ಎಂ. ಹಂಜಿ ಸರ್ಕಾರದ ಪರ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.