ರಬಕವಿ ಬನಹಟ್ಟಿ: ಸಮೀಪದ ಜಗದಾಳ ಗ್ರಾಮದ ಭಟ್ಟಡ ಫಾರ್ಮ್ ಹೌಸ್‌ನಲ್ಲಿರುವ ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಜಾತ್ರೆ ಶುಕ್ರವಾರ ಸಡಗರದಿಂದ ನಡೆಯಿತು.
ಜಾತ್ರೆ ಅಂಗವಾಗಿ ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಅಭಿಷೇಕ ನಡೆಯಿತು. ದುರ್ಗಾದೇವಿಗೆ ಬೆಳ್ಳಿಯ ಅಲಂಕಾರದ ಪೂಜೆ ಮಾಡಲಾಯಿತು. ದೇವಸ‍್ಥಾನದ ಮುಂಭಾಗದಲ್ಲಿ ಹೋಮ ನಡೆಯಿತು. ಬೆಳಿಗ್ಗೆಯಿಂದ ಸಂಜೆಯವರೆಗೆ ನೂರಾರು ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಮಧ್ಯಾಹ್ನ ದೇವಸ್ಥಾನದ ಆವಣರದಲ್ಲಿ ಪಲ್ಲಕ್ಕಿ ಸೇವೆ ನಡೆಯಿತು.
ಜಾತ್ರೆ ಅಂಗವಾಗಿ ಪ್ರಸಾದ ಸೇವೆ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಏಳು ಗಂಟೆಗೆ ಆರಂಭವಾದ ಪ್ರಸಾದ ಸೇವೆ ಸಂಜೆ 8 ರವರೆಗೆ ನಡೆಯಿತು.
ಹಾಲುಗ್ಗಿ, ಕುಂಬಳಕಾಯಿ ಬದನೆಕಾಯಿ ಪಲ್ಲೆ ಹಾಗೂ ಕಿಚಡಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 85 ಕ್ಕೂ ಹೆಚ್ಚು ಕ್ವಿಂಟಲ್ ಆಹಾರದ ವ್ಯವಸ್ಥೆ ಮಾಡಲಾಗಿತ್ತು. ಅಂದಾಜು 75 ರಿಂದ 80 ಸಾವಿರ ಜನರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಪ್ರಸಾದ ಸೇವೆಯ ವ್ಯವಸ್ಥಾಪಕ ಅಶೋಕ ಗೊಬ್ಬಾಣಿ ತಿಳಿಸಿದರು.
ದ್ವಾರಕಾಧೀಶ ಭಟ್ಟಡ, ಅಡಿವೆಪ್ಪ ಪಾಟೀಲ, ಸುರೇಶಅಸ್ಕಿ, ತಿಪ್ಪಣ‍್ಣ ಕುಳಲಿ, ವಿಠ್ಠಲ ಜಾಧವ, ಸದಾಶಿವ ದಡ್ಡಿಮನಿ, ಮಾರುತಿ ಸೋರಗಾವಿ, ಸದಾಶಿವ ಬಂಗಿ, ಮಲ್ಲಪ್ಪ ಕಾನಟ್ಟಿ, ಗುರು ಅಸ್ಕಿ, ಶ್ರೀಶೈಲ ಪಾಟೀಲ, ಮಹೇಶ ಭಟ್ಟಡ ಸೇರಿದಂತೆ ರಬಕವಿ ಬನಹಟ್ಟಿ, ಮುಧೋಳ, ಜಮಖಂಡಿ ತಾಲ್ಲೂಕಿನ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು.
ಜಾತ್ರೆ ಅಂಗವಾಗಿ ಮಲ್ಲಿಕಾರ್ಜುನ ನಾಟ್ಯ ಸಂಘದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.