ADVERTISEMENT

ಜಗತ್ತಿನ ಜ್ಞಾನಕ್ಕೆ ಬಹಳ ಮಹತ್ವವಿದೆ: ಶ್ರೀಶೈಲ ಶ್ರೀ

ಬಸವೇಶ್ವರ ಪಬ್ಲಿಕ್‌ ಶಾಲೆ ಉದ್ಧಾಟಿಸಿ ಶ್ರೀಶೈಲ ಶ್ರೀ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 2:54 IST
Last Updated 30 ಅಕ್ಟೋಬರ್ 2025, 2:54 IST
ಮುಧೋಳದ ಬಸವೇಶ್ವರ ಇಂಟರನ್ಯಾಶನಲ್ ಪಬ್ಲಿಕ್ ಶಾಲೆಯ ಕಟ್ಟಡವನ್ನು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ವೀರಣ್ಣ ಚರಂತಿಮಠ ಮುಂತಾದವರು ಭಾಗವಹಿಸಿದ್ದರು
ಮುಧೋಳದ ಬಸವೇಶ್ವರ ಇಂಟರನ್ಯಾಶನಲ್ ಪಬ್ಲಿಕ್ ಶಾಲೆಯ ಕಟ್ಟಡವನ್ನು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ವೀರಣ್ಣ ಚರಂತಿಮಠ ಮುಂತಾದವರು ಭಾಗವಹಿಸಿದ್ದರು   

ಮುಧೋಳ: ಜಗತ್ತಿನಲ್ಲಿ ಜ್ಞಾನವು ಬಹಳ ಶ್ರೇಷ್ಠವಾದ ವಸ್ತುವಾಗಿದೆ. ಜ್ಞಾನಕ್ಕಿಂತ ಮಿಗಿಲಾದ ವಸ್ತು ಈ ಜಗದಲ್ಲಿ ಮತ್ತೊಂದಿಲ್ಲ. ಮನುಷ್ಯ ಏನನ್ನು ಬೇಕಾದರೂ ಕಳೆದುಕೊಳ್ಳಬಹುದು. ಆದರೆ ಗಳಿಸಿದ ಜ್ಞಾನ ಎನ್ನುವ ಸಂಪತ್ತನ್ನು ಕಳೆದುಕೊಳ್ಳಲು ಆಗುವುದಿಲ್ಲ. ಅಥವಾ ಅದನ್ನು ಯಾರು ಅಪಹರಿಸಲು ಸಾಧ್ಯವಿಲ್ಲ ಎಂದು ಶ್ರೀಶೈಲ ಪೀಠದ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ನಗರದಲ್ಲಿ ನೂತನವಾಗಿ ನಿರ್ಮಿಸಿದ ಭವ್ಯವಾದ 103 ತರಗತಿ ಕೊಠಡಿಯ ಬಸವೇಶ್ವರ ಇಂಟರ್‌ ನ್ಯಾಶನಲ್ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಅಗಾಧವಾದಂತಹ ಜ್ಞಾನವನ್ನು ಗಳಿಸುತ್ತಿದ್ದಾರೆ. ಅದರ ಜೊತೆಗೆ ಸಂಸ್ಕಾರವನ್ನು ಪಡೆದುಕೊಳ್ಳುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಬಿವಿವಿ ಸಂಘವು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರಯುತ ವಿದ್ಯೆಯನ್ನು ನೀಡುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಕಾರ್ಯಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಬಿವಿವಿ ಸಂಘದ ಎಲ್ಲ ಬಿಪ್ಸ್ ಶಾಲೆಗಳಲ್ಲಿ 8,400ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಮುಂಬರುವ ದಿನಗಳಲ್ಲಿ 10 ಸಾವಿರದವರೆಗೆ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದೇವೆ. ಕೇವಲ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡುವುದು ಮಾತ್ರವಲ್ಲ. ಅವರಿಗೆ ಉತ್ತಮವಾದ ಸಂಸ್ಕಾರಯುತ ಗುಣಮಟ್ಟದ ಶಿಕ್ಷಣ ಮುಂದಿನ ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ಶೈಕ್ಷಣಿಕ ವಾತಾವರಣವನ್ನು ಕಲ್ಪಿಸುವ ಗುರಿಯನ್ನು ಹೊಂದಿದ್ದೇವೆ. ಸುಸಜ್ಜಿತ ಕಟ್ಟಡ, ಪ್ರಯೋಗಾಲಯ ಮುಂತಾದವುಗಳನ್ನು ಕಲ್ಪಿಸಿದ್ದೇವೆ ಎಂದು ತಿಳಿಸಿದರು.

ADVERTISEMENT

ಬಾಗಲಕೋಟೆ ಬಿಪ್ಸ್ ಶಾಲೆಯ ಪ್ರಾಚಾರ್ಯ ಸುರೇಶ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಪ್ಸ್ ಸಂಸ್ಥೆಗಳು ಬೆಳೆದು ಬಂದ ರೀತಿ ಅಲ್ಪಾವಧಿಯಲ್ಲಿ ಸಾಧಿಸಿದ ಸಾಧನೆ, ಸಂಸ್ಥೆಯ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರಕ್ಕೆ ನೀಡುತ್ತಿರುವ ಆದ್ಯತೆ ಕುರಿತು ವಿವರಿಸಿದರು.

ವೇದಿಕೆಯ ಮೇಲೆ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಸ್ಥೆಯ ಹೈಸ್ಕೂಲ್‍ಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ವಿವಿಧ ಕಮಿಟಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಎಲ್ಲ ಪದಾಧಿಕಾರಿ ಸದಸ್ಯರು ಪಾಲಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಟ್ಟಡದ ವಾಸ್ತು ಶಾಂತಿ ಪೂಜಾ ಹವನ ಕಾರ್ಯಕ್ರಮ ನೆರವೇರಿತು. ಮುಧೋಳ ಬಿಪ್ಸ್ ಶಾಲೆಯ ಪ್ರಾಚಾರ್ಯ ಶಶಿಧರ್ ಕುಲಕರ್ಣಿ ಸ್ವಾಗತಿಸಿದರು. ಶಿಕ್ಷಕಿಯರಾದ ರಮ್ಯಾ ನಾಯಕ ಹಾಗೂ ಸಂಧ್ಯಾ ಸರ್ವದೆ ನಿರೂಪಿಸಿದರು. ಉಪ ಪ್ರಾಚಾರ್ಯ ಸಂಗಪ್ಪ ಬಿಜ್ಜರಿಗೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.