ADVERTISEMENT

ತೇರದಾಳ|ಶಿಕ್ಷಣದ ಏಳ್ಗೆಗೆ ಸರ್ಕಾರೇತರ ಸಂಸ್ಥೆಗಳ ಕಾರ್ಯ ಮಹತ್ವದ್ದು: ಸಿದ್ದು ಸವದಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 4:44 IST
Last Updated 15 ನವೆಂಬರ್ 2025, 4:44 IST
ತೇರದಾಳದ ಜೆವಿ ಮಂಡಳದ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಟ್ಟಡವನ್ನು ಶಾಸಕ ಸಿದ್ದು ಸವದಿ ಹಾಗೂ ಮುಖಂಡರು ಉದ್ಘಾಟಿಸಿದರು.
ತೇರದಾಳದ ಜೆವಿ ಮಂಡಳದ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಟ್ಟಡವನ್ನು ಶಾಸಕ ಸಿದ್ದು ಸವದಿ ಹಾಗೂ ಮುಖಂಡರು ಉದ್ಘಾಟಿಸಿದರು.   

ತೇರದಾಳ: ಶೈಕ್ಷಣಿಕ ಕ್ಷೇತ್ರದ ಏಳಿಗೆಗೆ ಸರ್ಕಾರ ಮಾತ್ರ ಶ್ರಮಿಸಲು ಸಾಧ್ಯವಿಲ್ಲ. ಸರ್ಕಾರೇತರ ಸಂಘ ಸಂಸ್ಥೆಗಳು ಅದರ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವುದರಿಂದಲೇ ಇಂದು ಬಹಳಷ್ಟು ಜನರು ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಸೋಮವಾರ ಜರುಗಿದ ಇಲ್ಲಿನ ಜೆವಿ ಮಂಡಳದ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಇಂದು ಬಹಳಷ್ಟು ಶಿಕ್ಷಣ ಸಂಸ್ಥೆಗಳು ಹಣ ಸಂಪಾದನೆಯ ದಾರಿ ಹಿಡಿದು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲರಾಗಿರುವ ನಿದರ್ಶನಗಳು ಬಹಳಷ್ಟಿವೆ. ಅವುಗಳ ಮಧ್ಯೆ ಅಹಿಂಸಾ ತತ್ವ ಪರಿಪಾಲಿಸುವ ಮೂಲಕ ಸಮಾಜದಿಂದ ಪಡೆದುಕೊಂಡಿರುವುದನ್ನು ಮತ್ತಷ್ಟು ಸಮಾಜಕ್ಕೆ ಮರಳಿಸುವ ಕೆಲಸ ಜೆವಿ ಮಂಡಳ ಸಂಸ್ಥೆ ಮಾಡುತ್ತಿದೆ. ಇದರಡಿಯಲ್ಲಿ ಇನ್ನಷ್ಟು ಅಂಗಸಂಸ್ಥೆಗಳು ತಲೆಯೆತ್ತಲಿ ಎಂದರು.

ADVERTISEMENT

ಕಾಲೇಜಿನ ಪ್ರಾಚಾರ್ಯ ಎಮ್.ಎಸ್.ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜು ಬೆಳೆದು ಬಂದ ದಾರಿಯನ್ನು ಹಾಗೂ ಗ್ರಾಮೀಣ ಭಾಗದಲ್ಲಿ ತಾಂತ್ರಿಕ ಶಿಕ್ಷಣ ಪರಿಚಯಿಸಿದ್ದು, ಅದರಿಂದ ಉದ್ಯೋಗ ಪಡೆದುಕೊಂಡವರ ಬಗ್ಗೆ ವಿವರಿಸಿದರು.

ಸಂಸ್ಥೆಯ ಕಾಯರ್ಾಧ್ಯಕ್ಷ ಡಿ.ಆರ್.ಪಾಟೀಲ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಟಿ.ಸಿ.ಪಡಸಲಗಿ ವಹಿಸಿದ್ದರು. ಸಂಸ್ಥೆಯ ಬಿ.ಎಸ್.ಸಾವಂತನವರ, ಡಾ,ಜೆ.ಬಿ.ಆಲಗೂರ, ಪ್ರವೀಣ ನಾಡಗೌಡ, ಎಮ್.ಪಿ.ಅಸ್ಕಿ, ಡಿ.ಸಿ.ಪಾಟೀಲ್, ಜಿ.ಬಿ.ಬೇಡಗೆ, ಪಿ.ಜಿ.ಹಟ್ಟಿ, ಕೆ.ಪಿ.ಕುಳ್ಳಿ, ಪಿ.ಡಿ.ಬದನಿಕಾಯಿ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾಥರ್ಿಗಳು, ಪಾಲಕರು ಇದ್ದರು.