ಗುಳೇದಗುಡ್ಡ: ಪಟ್ಟಣದಲ್ಲಿ ಈದ್ ಮಿಲಾದ್ ಹಾಗೂ ಭವ್ಯ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಿಂದ ನಡೆಸಲಾಯಿತು.
ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ಅಂಗವಾಗಿ ಮುಸ್ಲಿಮರು ಶ್ರದ್ಧೆ–ಭಕ್ತಿಯಿಂದ ಬಂಡಾರಿ ಕಾಲೇಜ್ ವೃತ್ತದಿಂದ ಆರಂಭಿಸಿ ಭಾಗವಾನ್ ಪೇಟೆಯವರೆಗೆ ಮೆರವಣಿಗೆ ನಡೆಸಿದರು. ಇಸ್ಲಾಂ ಧರ್ಮ ಗುರುಗಳಾದ ಅಲಾಮಾ ಅಬೂಬಕರ್ ಮುಫ್ತಿ ಸಕಾಫೆ ನೇತೃತ್ವ ವಹಿಸಿದ್ದರು.
ಸಮಾಜದ ಮುಖಂಡ ಮುಬಾರಕ್ ಮಂಗಳೂರು ಅವರು ಧರ್ಮ ಗುರುಗಳನ್ನು ಸನ್ಮಾನಿಸಿದರು.
ಮೆರವಣಿಗೆಯಲ್ಲಿ ಸಮಾಜದ ಮುಖಂಡರಾದ ರಫಿಕ ಕಲಬುರ್ಗಿ, ಜಮೀರ್ ಮೌಲ್ವಿ, ಅಬ್ದುಲ್ ಜಿಲಾನಿ, ಹುಚ್ಚುಸಾಬ್ ಇಲಕಲ್, ಗೈಬುಸಾಬ ಡಂಗಿ, ಬಂದೇನವಾಜ್ ಕಲ್ಬುರ್ಗಿ, ಅಲ್ಲಾಭಕ್ಷ ದೋಟೆಗಾರ, ಅಲ್ತಾಫ್ ಸವರಾಜ್, ಸಮಾಜದ ಮುಖಂಡರು, ಹಿರಿಯರು, ಯುವಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.