ADVERTISEMENT

ಬಾಗಲಕೋಟೆ | ರಾಜ್ಯಸಭೆಗೆ ಭಾಂಡಗೆ ಆಯ್ಕೆ: ಬೆಂಬಲಿಗರಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 16:20 IST
Last Updated 27 ಫೆಬ್ರುವರಿ 2024, 16:20 IST
ನಾರಾಯಣ ಭಾಂಡಗೆ
ನಾರಾಯಣ ಭಾಂಡಗೆ   

ಬಾಗಲಕೋಟೆ: ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಎರಡನೇ ಬಾರಿಗೆ ರಾಜ್ಯಸಭೆ ಸದಸ್ಯರಾಗುವ ಅವಕಾಶ ದೊರೆತಿದೆ. ನಾರಾಯಣ ಭಾಂಡಗೆ  ಆಯ್ಕೆಯಾಗಿರುವುದು ಘೋಷಣೆಯಾಗುತ್ತಿದ್ದಂತೆಯೇ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ರಾಜ್ಯಸಭೆ ನಾಲ್ಕು ಸ್ಥಾನಗಳಿಗೆ ಐದನೇಯವರು ಸ್ಪರ್ಧೆಗೆ ಇಳಿದಿದ್ದರಿಂದ ಚುನಾವಣೆ ಕುತೂಹಲ ಮೂಡಿಸಿತ್ತು. ಆದರೆ, ಬಿಜೆಪಿಯು ತನ್ನ ಅಭ್ಯರ್ಥಿ ಆಯ್ಕೆಗೆ ಅವಶ್ಯಕ ಮತಗಳನ್ನು ಹೊಂದಿದ್ದರಿಂದ ಗೆಲುವಿನ ವಿಶ್ವಾಸವಿತ್ತು. ಅದರಂತೆಯೇ ಗೆಲುವು ಸಾಧಿಸಿದ್ದಾರೆ.

ಜಿಲ್ಲೆಯಿಂದ ಈ ಹಿಂದೆ ಎಸ್‌. ನಿಜಲಿಂಗಪ್ಪ ಅವರ ಆತ್ಮೀಯರಾಗಿದ್ದ ರಾಚೋಟಪ್ಪ ಎಂ. ದೇಸಾಯಿ ರಾಜ್ಯಸಭೆ ಸದಸ್ಯರಾಗಿದ್ದರು. ಎರಡನೇ ಬಾರಿಗೆ ಅಂತಹ ಅವಕಾಶ ಭಾಂಡಗೆ ಅವರ ಮೂಲಕ ದೊರೆತಿದೆ.

ADVERTISEMENT

ಕೃಷ್ಣಾ ಭಾಂಡಗೆ, ಸೋನಾಬಾಯಿ ಭಾಂಡಗೆ ಅವರ ಪುತ್ರ ನಾರಾಯಣ ಬಾಂಡಗೆ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ, ‍ಪ್ರೌಢ ಶಿಕ್ಷಣವನ್ನು ಸಕ್ರಿ ಹೈಸ್ಕೂಲ್‌ನಲ್ಲಿ, ಕಲಾ ಪದವಿಯನ್ನು ಬಿ.ವಿ.ವಿ. ಸಂಘದ ಬಸವೇಶ್ವರ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.

ಜನಸಂಘದ ಮೂಲಕ ಸಾರ್ವಜನಿಕ ಕಾಲಿಟ್ಟ ಅವರು, ಜನ ಸಂಘದ ನಗರ ಘಟಕದ ಮೊದಲ ಅಧ್ಯಕ್ಷರಾಗಿದ್ದಾರೆ. ಬಿಜೆಪಿಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ರಾಮ ಮಂದಿರ ಸೇರಿದಂತೆ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.