ADVERTISEMENT

ಹುನಗುಂದ | ಮಳೆ ಆರ್ಭಟ: ಹೊಲದಲ್ಲಿ ನಿಂತ ನೀರು

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:16 IST
Last Updated 21 ಜುಲೈ 2025, 4:16 IST
ಹುನಗುಂದ ಭಾನುವಾರ ಸಂಜೆ ಮಳೆ ಆರ್ಭಟಿಸಿದ ಪರಿಣಾಮ ತಾಲ್ಲೂಕಿನ ಚಿಕ್ಕಬಾದವಾಡಗಿ ಗ್ರಾಮದ ಹೊರವಲಯದ ಜಮೀನಿನ ಗೋವಿನಜೋಳ ಬೆಳೆಯಲ್ಲಿ ನೀರು ನಿಂತಿರುವುದು
ಹುನಗುಂದ ಭಾನುವಾರ ಸಂಜೆ ಮಳೆ ಆರ್ಭಟಿಸಿದ ಪರಿಣಾಮ ತಾಲ್ಲೂಕಿನ ಚಿಕ್ಕಬಾದವಾಡಗಿ ಗ್ರಾಮದ ಹೊರವಲಯದ ಜಮೀನಿನ ಗೋವಿನಜೋಳ ಬೆಳೆಯಲ್ಲಿ ನೀರು ನಿಂತಿರುವುದು   

ಹುನಗುಂದ: ತಾಲ್ಲೂಕಿನ ಚಿತ್ತಾವಾಡಗಿ, ಯಡಹಳ್ಳಿ, ವೀರಪೂರ, ಬನ್ನಿಹಟ್ಟಿ, ಹಿರೇಬಾದವಾಡಗಿ, ಚಿಕ್ಕಬಾದವಾಡಗಿ ಸೇರಿದಂತೆ ಕೆಲವು ಭಾಗಗಳಲ್ಲಿ ಭಾನುವಾರ ಸಂಜೆ ಮಳೆ ಅರ್ಭಟಿಸಿದೆ.

ಒಂದೂವರೆ ಗಂಟೆ ಜೋರು ಮಳೆ ಆಗಿದೆ. 

ಮಳೆ ಆರ್ಭಟಕ್ಕೆ ಹೆಸರು, ಸೂರ್ಯಕಾಂತಿ, ಮೆಣಸಿನಕಾಯಿ, ತೊಗರಿ, ಗೋವಿನಜೋಳ ಬೆಳೆಗಳಲ್ಲಿ ಕೆಲವು ಕಡೆ ನೀರು ನಿಂತಿದ್ದರೆ, ತಗ್ಗು, ಒಡ್ದು ಹಾಗೂ ಬದುಗಳಲ್ಲಿ ಸಹ ಹೆಚ್ಚಿನ ಪ್ರಮಾಣದ ನೀರು ನಿಂತಿದೆ.

ADVERTISEMENT

ಜೋರು ಮಳೆಗೆ ತಾಲ್ಲೂಕಿನ ಚಿತ್ತವಾಡಗಿ ಗ್ರಾಮದ ಗದ್ದನಗೌಡ ಗೌಡರ ಮನೆಗೆ ಚರಂಡಿ ಮತ್ತು ಮಳೆ ನೀರು ನುಗ್ಗಿ ಕೆಲ ಸಮಯ ಅವಾಂತರ ಸೃಷ್ಟಿಸಿತು.

ಹುನಗುಂದ ಭಾನುವಾರ ಸಂಜೆ ಮಳೆ ಆರ್ಭಟಿಸಿದ ಪರಿಣಾಮ ತಾಲ್ಲೂಕಿನ ವೀರಾಪೂರ ಗ್ರಾಮದ ಹೋರವಲಯದ ಜಮೀನಿನ ಸೂರ್ಯಕಾಂತಿ ಬೆಳೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತಿರುವುದು

ಗ್ರಾಮದ ಹೊರ ವಲಯದ ಲಂಡಕೇನಹಳ್ಳದ ಕೆಳ ಸೇತುವೆ ಮೇಲೆ ನೀರು ಹರಿಯಿತು. ಸೇತುವೆ ಮಧ್ಯ ಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಗೋಡೆ ಕುಸಿದಿದೆ.

ಹುನಗುಂದ ಭಾನುವಾರ ಸಂಜೆ ಮಳೆ ಆರ್ಭಟಿಸಿದ ಪರಿಣಾಮ ತಾಲ್ಲೂಕಿನ ವೀರಾಪೂರ ಗ್ರಾಮದ ಹೊರವಲಯದ ಜಮೀನಿನ ಒಳಗಟ್ಟಿ ಬಾಯಿಯಿಂದ ನೀರು ದುಮ್ಮುಕ್ಕುತ್ತಿರುವುದು
ಬಾದಾಮಿಯಲ್ಲಿ ರಭಸದ ಮಳೆ
ಬಾದಾಮಿ: ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಭಾನುವಾರ ಗುಡುಗಿನ ಆರ್ಭಟದಿಂದ ಗಂಟೆ ಕಾಲ ರಭಸದ ಮಳೆ ಸುರಿಯಿತು. ಬೆಟ್ಟದ ಮೇಲಿಂದ ಜೋಡಿ ಜಲಧಾರೆಗಳು ಧುಮ್ಮುಕ್ಕಿದವು. ಬೆಟ್ಟದ ಗರ್ಭದಿಂದ ಕಾರಂಜಿ ನೀರು ರಭಸವಾಗಿ ಹರಿದು ಅಗಸ್ತ್ಯತೀರ್ಥ ಹೊಂಡವನ್ನು ಸೇರಿತು. ರಸ್ತೆಯಲ್ಲಿ ಅಡಿಗಿಂತ ಅಧಿಕ ನೀರು ಹರಿದು ರಸ್ತೆ ಮತ್ತು ಚರಂಡಿಯ ಕೊಳೆಯೆಲ್ಲ ಸ್ವಚ್ಛವಾಯಿತು. ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರು ಸಂತಸಗೊಂಡಿದ್ದಾರೆ. ಮುಂಗಾರು ಬೆಳೆಗೆ ಅನುಕೂಲಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.