ADVERTISEMENT

ಬಾಗಲಕೋಟೆ | ಬೆಂಕಿ ಅನಾಹುತ: ಎಂಟು ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 2:25 IST
Last Updated 20 ಅಕ್ಟೋಬರ್ 2025, 2:25 IST
ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾಗಿರುವ ದ್ವಿಚಕ್ರ ವಾಹನಗಳು
ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾಗಿರುವ ದ್ವಿಚಕ್ರ ವಾಹನಗಳು   

ಬಾಗಲಕೋಟೆ: ತಾಲ್ಲೂಕಿನ ಗದ್ದನಕೇರಿ ಹತ್ತಿರ ಬೆಂಕಿ ಹತ್ತಿಕೊಂಡು ಎಂಟು ಜನರಿಗೆ ಗಾಯಗಳಾಗಿದ್ದು, ಏಳು ಮೋಟಾರ್ ಸೈಕಲ್‌ಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.

ಶನಿವಾರ ಮಧ್ಯರಾತ್ರಿ 2.30ರ ಸುಮಾರಿಗೆ ಪ್ರಾಥಮಿಕ ಮಾಹಿತಿಯಂತೆ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಅಲ್ಲಿಯೇ ಇದ್ದ ಕೊಳವೆಬಾವಿ ಕೊರೆಯಲು ಬಳಸುವ ದ್ರವ ಪದಾರ್ಥಕ್ಕೆ ಬೆಂಕಿ ತಾಗಿದೆ. ನಂತರ ಅಲ್ಲಿಯೇ ಇದ್ದ ಸಿಲಿಂಡರ್‌ಗೂ ತಗುಲಿ ಅದು ಸ್ಫೋಟಗೊಂಡಿದೆ.

ಕಲ್ಮೇಶ ಲೋಕಣ್ಣವರ, ಸಚಿನ್‌, ಗಣೇಶ, ದಾಪು ದೇವಿ, ಡಿಂಪಲ್‌ ಪಟೇಲ್, ಸ್ನೇಹಾ, ಐಶ್ವರ್ಯ, ಸೃಷ್ಟಿ ಎಂಬುವವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿ ಶಾಮಕ ದಳ, ಪೊಲೀಸ್‌ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿದ್ದಾರೆ. ಕೊಳವೆಬಾವಿ ಅಂಗಡಿ ಮಾಲೀಕ, ಕಟ್ಟಡ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.