ತೇರದಾಳ: ತಾಲ್ಲೂಕಿನ ಗೋಲಬಾವಿ ಗ್ರಾಮದ ಭಕ್ತರು ಅನ್ನಪ್ರಸಾದ ವಿತರಣೆಗೆ 5 ಕ್ವಿಂಟಲ್ ಜಿಲೇಬಿ ನೀಡಿ, ಭಕ್ತಿ ಮೆರೆದರು.
ಪಟ್ಟಣದ ಆರಾಧ್ಯ ದೈವ ಅಲ್ಲಮಪ್ರಭು ದೇವರ ನೂತನ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಜರುಗುತ್ತಿರುವ ಬಸವ ಪುರಾಣ ಮಂಗಲದ ಬಳಿಕ ಭಕ್ತರಿಗೆ ವಿತರಣೆಯಾಗುವ ಅನ್ನಪ್ರಸಾದಕ್ಕೆ ದಿನಕ್ಕೊಂದು ಭಕ್ಷ್ಯವನ್ನು ಭಕ್ತರು ತಯಾರಿಸಿ, ಇಲ್ಲವೇ ದವಸ, ಧಾನ್ಯ ಅಥವಾ ಹಣದ ರೂಪದಲ್ಲಿ ದೇಣಿಗೆ ನೀಡುತ್ತ ಬಂದಿದ್ದಾರೆ.
16ನೇ ದಿನವಾದ ಮಂಗಳವಾರ ತಾಲ್ಲೂಕಿನ ಗೋಲಬಾವಿ ಗ್ರಾಮದ ಭಕ್ತರು ದೇಣಿಗೆ ಸಂಗ್ರಹಿಸಿ 5 ಕ್ವಿಂಟಲ್ ಜಿಲೇಬಿ ತಯಾರಿಸಿ, ಮಹಿಳೆಯರು ತಯಾರಿಸಿದ ರೊಟ್ಟಿ ಹಾಗೂ ಸಂಗ್ರಹಿಸಿದ ₹3 ಲಕ್ಷ ಹಣವನ್ನು ದೇವಸ್ಥಾನ ಲೋಕಾರ್ಪಣೆ ಸಮಿತಿಗೆ ನೀಡಿದರು.
ಜಿಲೇಬಿ ತಯಾರಿಸಿ ಭಕ್ತರು ತಲೆ ಮೇಲೆ ಹೊತ್ತು ಅಂದಾಜು ಆರು ಕಿ.ಮೀ ಕಾಲ್ನಡಿಗೆಯಲ್ಲಿಯೇ ಬಂದು ದೇವಸ್ಥಾನ ತಲುಪಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.