ADVERTISEMENT

ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಕಂಠಿ ಪತ್ನಿ ಮರಿಬಸಮ್ಮ ನಿಧನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 10:56 IST
Last Updated 8 ಡಿಸೆಂಬರ್ 2020, 10:56 IST
ಮರಿಬಸಮ್ಮ ಕಂಠಿ
ಮರಿಬಸಮ್ಮ ಕಂಠಿ    

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ದಿ. ಎಸ್.ಆರ್.ಕಂಠಿಯವರ ಪತ್ನಿ ಮರಿಬಸಮ್ಮ ಕಂಠಿ ಮಂಗಳವಾರ ನಿಧನರಾಗಿದ್ದಾರೆ.

102 ವರ್ಷದ ಮರಿಬಸಮ್ಮ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರನಲ್ಲಿದ್ದರು. ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರು ಮಂಗಳವಾರ ನಿಧನರಾದರು. ಮೃತರಿಗೆ ಹಣಕಾಸು ಆಯೋಗದ ಮಾಜಿ ಸದಸ್ಯ, ಶಿಕ್ಷಣ ತಜ್ಞ ಮಹೇಂದ್ರ ಕಂಠಿ ಹಾಗೂ ಬಳಗ ಇದ್ದಾರೆ. ಅಂತ್ಯಕ್ರಿಯೆ ಬುಧವಾರ ಇಳಕಲ್ ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT