ADVERTISEMENT

ಗಲಗಲಿ: ಲಕ್ಷ್ಮೀ ನರಸಿಂಹದೇವರ ಉತ್ಸವ

​ಪ್ರಜಾವಾಣಿ ವಾರ್ತೆ
Published 6 ಮೇ 2025, 14:20 IST
Last Updated 6 ಮೇ 2025, 14:20 IST
ಗಲಗಲಿಯ ಲಕ್ಷ್ಮೀ ನರಸಿಂಹ ದೇವರು
ಗಲಗಲಿಯ ಲಕ್ಷ್ಮೀ ನರಸಿಂಹ ದೇವರು   

ಬೀಳಗಿ: ತಾಲ್ಲೂಕಿನ ಗಲಗಲಿಯ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ದೇವರ ಉತ್ಸವವು ಮೇ 7 ರಿಂದ14 ರವರೆಗೆ ವೈಭವದಿಂದ ನಡೆಯಲಿದೆ.

ಮೇ 7ರಂದು ಆರಂಭಗೊಳ್ಳುವ ಉತ್ಸವದ ನಿಮಿತ್ತ ಪ್ರತಿದಿನ ದೇವಸ್ಥಾನದಲ್ಲಿ ಬೆಳಿಗ್ಗೆ ಹೋಮ-ಹವನ, ಅಭಿಷೇಕ, ವಿಶೇಷ ಪೂಜೆ, ಉಪನ್ಯಾಸ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿವೆ. ಸಂಜೆ ಆಕರ್ಷಕ ವಾಹನೋತ್ಸವವು ಪ್ರಮುಖ ಬೀದಿಗಳಲ್ಲಿ ಜರುಗಲಿದೆ.

ಮೇ 10ರಂದು ನರಸಿಂಹ ಜಯಂತಿ ನಡೆಯಲಿದ್ದು ಸಂಜೆ ಹುಬ್ಬಳ್ಳಿಯ ಸತ್ಯಮೂರ್ತಿ ಆಚಾರ್ಯ ಅವರಿಂದ ಪ್ರವಚನ ನಡೆಯಲಿದೆ. 12ರಂದು ಮಧ್ಯಾಹ್ನ ವೈಭವದ ರಥೋತ್ಸವ ತೇರಿನಮನೆಯಿಂದ ಗಾಲವೇಶ್ವರ ದೇವಸ್ಥಾನದವರೆಗೆ ಜರುಗಲಿದೆ. ನಂತರ ತೊಟ್ಟಿಲೋತ್ಸವ, ಪ್ರಸಾದ ವಿತರಣೆ ನಡೆಯಲಿದೆ. 13ರಂದು ಗೋಪಾಳಕಾವಲಿ ಜರುಗಲಿದ್ದು ನಂತರ ಅನ್ನಸಂತರ್ಪಣೆ ನಡೆಯಲಿದೆ. 14 ರಂದು ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಲಕ್ಷ್ಮೀ ನರಸಿಂಹ ದೇವಸ್ಥಾನ ಟ್ರಸ್ಟ್ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.