ADVERTISEMENT

ಮುಧೋಳ | ಘಟಪ್ರಭಾ ನದಿ ಪ್ರವಾಹ: ಯಾದವಾಡ ಸೇತುವೆ ಮೇಲೆ ನೀರು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 2:47 IST
Last Updated 22 ಆಗಸ್ಟ್ 2025, 2:47 IST
ಮುಧೋಳದ ಮುಳುಗಡೆಯಾಗಿರುವ ಯಾದವಾಡ ಸೇತುವೆ ನೀರನ್ನು ನೋಡಲು ನೂರಾರು ಜನರು ಆಗಮಿಸುತ್ತಿರುವುದು
ಮುಧೋಳದ ಮುಳುಗಡೆಯಾಗಿರುವ ಯಾದವಾಡ ಸೇತುವೆ ನೀರನ್ನು ನೋಡಲು ನೂರಾರು ಜನರು ಆಗಮಿಸುತ್ತಿರುವುದು   

ಮುಧೋಳ: ಮಳೆ ನಿಂತಿದೆಯಾದರೂ ಪ್ರವಾಹ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆ ಸಂಪರ್ಕಿಸುವ ಮುಧೋಳ-ಯಾದವಾಡ ಸೇತುವೆ ಮೇಲೆ ಗುರುವಾರ ಸಂಜೆ ನೀರು ಬಂದಿರುವುದರಿಂದ ಸಂಚಾರ ನಿಷೇಧಿಸಲಾಗಿದೆ.

ಸೇತುವೆ ಮೇಲೆ ನೀರು ಬಂದಿರುವುದರಿಂದ ಬಸ್‍ಗಳು ಇಲ್ಲದೇ ಜನರು ಸುತ್ತುವರಿದು ಹೋಗುತ್ತಿದ್ದಾರೆ.

ನೀರಿನ ಒಳಹರಿವು ಕಡಿಮೆಯಾಗುತ್ತಿರುವುದರಿಂದ ಶುಕ್ರವಾರ ಯಾದವಾಡ ಸೇತುವೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

ADVERTISEMENT

ತಾಲ್ಲೂಕಿನ ಐತಿಹಾಸಿಕ ಮಾಚಕನೂರ ಹೊಳೆಬಸವೇಶ್ವರ ದೇಗುಲ ಸಂಪೂರ್ಣ ಜಲಾವೃತವಾಗಿದೆ.

ಮುಳುಗಡೆಯಾಗಿರುವ ಸೇತುವೆ ನೀರನ್ನು ನೋಡಲು ನೂರಾರು ಜನರು ಬಂದಿದ್ದು, ಫೋಟೊ ವಿಡಿಯೊ ಮಾಡುತ್ತಿರುವುದು ಕಂಡುಬಂತು

ಮುಧೋಳ ತಾಲ್ಲೂಕು ಮಾಚಕನೂರ ಗ್ರಾಮದ ಐತಿಹಾಸಿಕ ಹೊಳೆಬಸವೇಶ್ವರ ದೇವಾಲಯ ಜಲಾವೃತವಾಗಿರುವುದು (ಚಿತ್ರ ಗೋಪಾಲ ದಾಸರಡ್ಡಿ )
ಮುಧೋಳದಿಂದ ಬೆಳಗಾವಿ ಜಿಲ್ಲೆ ಸಂಪರ್ಕಿಸುವ ಘಟಪ್ರಭಾ ನದಿಯ ಯಾದವಾಡ ಸೇತುವೆ ಮೇಲೆ ನೀರು ಬಂದಿರುವುದು
ಮುಧೋಳದಿಂದ ಬೆಳಗಾವಿ ಜಿಲ್ಲೆ ಸಂಪರ್ಕಿಸುವ ಘಟಪ್ರಭಾ ನದಿಯ ಯಾದವಾಡ ಸೇತುವೆ ಮೇಲೆ ನೀರು ಬಂದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.