ಮಹಾಲಿಂಗಪುರ: ವಿದ್ಯಾರ್ಥಿ ಆಗಿದ್ದಾಗಲೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಎಂದು ಬಾಗಲಕೋಟೆಯ ಸಾಹಿತಿ ಪ್ರಕಾಶ ಖಾಡೆ ಹೇಳಿದರು.
ಸಮೀಪದ ರನ್ನಬೆಳಗಲಿಯ ಸಿದ್ಧಾರೂಢ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ವರ್ಗದ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡ ‘ಅಮೃತ ಸಿಂಚನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಬಕವಿಯ ಸಾಹಿತಿ ಯಶವಂತ ವಾಜಂತ್ರಿ ಮಾತನಾಡಿ, ‘ನಗುವಿನಿಂದ ಆರೋಗ್ಯ ಸುಧಾರಿಸುತ್ತದೆ. ಜೀವನಕ್ಕೆ ಲವಲವಿಕೆ ಸಿಗುತ್ತದೆ. ಅಭ್ಯಾಸದೊಂದಿಗೆ ನಗೆಯನ್ನೂ ಜೀವನದಲ್ಲಿ ಅಳವಡಿಸಿಕೊಂಡಿರಬೇಕು’ ಎಂದರು.
ಬಾಗಲಕೋಟೆಯ ಜಾನಪದ ಕವಿ ಬಸವರಾಜ ಕೊಣ್ಣೂರ ತಮ್ಮ ಶಾಯಿರಿ ಹೇಳಿದರು. ಎಸ್‍ಡಿಎಂಸಿ ಅಧ್ಯಕ್ಷ ಗಿರೀಶ ಸಂಕ್ರಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಎಸ್.ಎಸ್.ಉದಪುಡಿ, ಬಿ.ಪಿ.ಚೋಪಡೆ, ವಿ.ಎಂ.ಹೊಸೂರ, ಎಲ್.ವೈ.ಶಾಸ್ತ್ರಿ, ಎಸ್.ಎಂ.ಮೇಗಾಡಿ, ಎಲ್.ಕೆ.ಮಂಟೂರ, ಶ್ರೀಶೈಲ ಕಾಡದೇವರ, ಲಕ್ಷ್ಮಣ ಕಂಬಾಳಿ, ಕಿರಣ ಪವಾರ, ರವಿಕುಮಾರ ಹಿರೇಕಲ್ಮಠ, ಶಿವಾನಂದ ನೀಲನ್ನವರ, ಮಾಯಪ್ಪ ಲೋಕ್ಯಾಗೋಳ, ಮಹಾಂತೇಶ ಲೋಕಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.