
ಪ್ರಜಾವಾಣಿ ವಾರ್ತೆ
ಗುಳೇದಗುಡ್ಡ: ಸಾರ್ವಜನಿಕ ಸ್ಥಳವನ್ನು ಅಶುಚಿಗೊಳಿಸಿದರೆ ಅಂತಹವರಿಗೆ ದಂಡ ವಿಧಿಸಲು ಪುರಸಭೆಯು ತೀರ್ಮಾನಿಸಿದೆ ಎಂದು ಮುಖ್ಯಾಧಿಕಾರಿ ಎ.ಎಚ್. ಮುಜಾವರ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಸ್ತೆಯ ಮೇಲೆ ಕಸ ಎಸೆಯುವುದು, ಉಗುಳುವುದು, ಸ್ನಾನ ಮಾಡುವುದು, ಬಯಲು ಮಲ ವಿಸರ್ಜನತೆ, ಕಟ್ಟಡ ತ್ಯಾಜ್ಯ ಸುರಿಯುವುದು, ಘನತ್ಯಾಜ್ಯ ಸುರಿಯುವುದು, ಮೀನು– ಕೋಳಿ ಮತ್ತು ಕಸಾಯಿಖಾನೆಯ ತ್ಯಾಜ್ಯವನ್ನು ಸುರಿದರೆ ದಂಡ ವಿಧಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.