ಗುಳೇದಗುಡ್ಡ : ‘ದೇಶದಲ್ಲಿ ಸಂತಪರಂಪರೆ ಅನಾದಿಕಾಲದಿಂದಲೂ ಇದೆ. ಅವರು ಕೀರ್ತನೆಗಳ ಮೂಲಕ ಸಮಾಜ ಸುಧಾರಣೆ ಮಾಡಿದರು. ಭಕ್ತಿ ಪರಂಪರೆಯ ಮಾರ್ಗದ ಮೂಲಕ ಅಪಾರವಾದ ಕೊಡುಗೆ ನೀಡಿದರು’ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.
ಅವರು ಗುರುವಾರ ಪಟ್ಟಣದ ಪಾಂಡುರಂಗ ವಿಠ್ಠಲ ದೇವಸ್ಥಾನದಲ್ಲಿ ರಾಮನವಮಿ ಉತ್ಸವದ ನಿಮಿತ್ತ ಹಮ್ಮಿಕೊಂಡ ದಿಂಡಿ ಸಪ್ತಾಹ, ಜ್ಞಾನೇಶ್ವರಿ ಪಾರಾಯಣ ಹಾಗೂ ಕಳಸಾರೋಹನ ಸಮಾರಂಭದಲ್ಲಿ ಮಾತನಾಡಿದರು.
ಜನರು ಭಕ್ತಿ ಮಾರ್ಗದ ಮೂಲಕ ನೆಮ್ಮದಿ ಕಾಣಬಹುದಾಗಿದ್ದು ದೇವರನ್ನು ಭಜನೆ,ಕೀರ್ತನೆಗಳನ್ನು ಸ್ಮರಿಸಬಹುದಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ ಮಾತನಾಡಿದರು. ಕೃಷ್ಣ ಮಹಾರಾಜರು,ಮುರುಘಾಮಠದ ಕಾಶೀನಾಥ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿದರು. ಕೀರ್ತನಕಾರರಿಗೆ,ಮೃದಂಗವಾದಕರಿಗೆ,ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾಂಡುರಂಗನ ಭಾವಚಿತ್ರದ ಮೆರವಣಿಗೆ ಮಹಿಳೆಯರು ಕುಂಭ ಕಳಸದೊಂದಿಗೆ ಜರುಗಿತು.
ಸಂಪತ್‍ಕುಮಾರ ರಾಠಿ,ರಂಗಪ್ಪ ಶೇಬಿನಕಟ್ಟಿ,ಮುರುಗೇಶ ರಾಜನಾಳ,ಸುಭಾಷ ಸಿಂಧೆ,ಗೋಪಾಲ ಸಿಂಧೆ,ಪರಶುರಾಮ ಸಿಂಧೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.